ಮನವಿ ಮಾಡಿದ್ದರೂ ತೆರೆದ ಬಾವಿ ಮುಚ್ಚಿಲ್ಲ

0
29

ಎಂ ಎನ್ ಕೋಟೆ:
  ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ನಾಯಕರ ಬೀದಿಯ ರಸ್ತೆ ಪಕ್ಕದಲ್ಲಿ ತೆರೆದ ಬಾವಿ ಇದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಾಗೂ ಅಧಿಕಾರಿಗಳಿಗೆ ಈ ಬಾವಿಯನ್ನು ಮುಚ್ಚಬೇಕು ಎಂದು ಮನವಿ ಮಾಡಿದರೂ ಇದರ ಬಗ್ಗೆ ಯಾರು ಕ್ರಮಕೈಗೊಂಡಿಲ್ಲ ಎಂದು ಎಂ.ಎನ್ ಕೋಟೆ ಗ್ರಾಮಸ್ಥರು ಆರೋಪಿಸಿದ್ದಾರೆ.

      ಈ ಬಾವಿ ರಸ್ತೆಯ ಪಕ್ಕದಲ್ಲಿ ಇದೆ, ಅಲ್ಲದೆ ಶಾಲಾ ಮಕ್ಕಳು ದ್ವಿಚಕ್ರವಾಹನ ಸವಾರರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸಾಕಷ್ಟು ವಾಹನಗಳು ಹೋಗುತ್ತವೆ, ಏನಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ನೇರಹೊಣೆ ಅಧಿಕಾರಿಗಳೇ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದೇ ರಸ್ತೆಯಲ್ಲಿ ಹೋಗುತ್ತಾರೆ, ಆದರೆ ಈ ಬಾವಿಯನ್ನು ಮುಚ್ಚಬೇಕು ಎಂದು ಇಲ್ಲಿಯವರೆಗೂ ಯಾರೂ ಈ ಭಾವಿಯ ಬಗ್ಗೆ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟ ಎಂ.ಎನ್ ಕೋಟೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಗ್ರಾಮಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ. ಅನಾಹುತ ಸಂಭವಿಸುವ ಮುನ್ನ ಈ ಬಾವಿಯನ್ನು ಮುಚ್ಚಬೇಕು, ಇಲ್ಲದಿದ್ದರೆ ಉಗ್ರಹೋರಾಟ ಮಾಡುತ್ತೇವೆ ಎಂದು ಎಂ.ಎನ್ ಕೋಟೆ ಗ್ರಾಮಸ್ಥರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here