ಮಳೆಗಾಗಿ ಪ್ರಾರ್ಥಿಸಿ ಗೇಟಿ ಬಸವೇಶ್ವರನಿಗೆ ರುದ್ರಾಭಿಷೇಕ: ಅಂದೇ ಸುರಿದ ಮಳೆ

0
24

 ಹರಪನಹಳ್ಳಿ:

      ಪಟ್ಟಣದ ಹರಿಹರ ರಸ್ತೆಯಬಳಿಯಿರುವ ಐತಿಹಾಸಿಕ ಗೇಟಿ ಬಸವೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ರುದ್ರಾಭಿಷೇಕ ನೆರವೇರಿಸಿದರು.

      ಶತಮಾನದ ಇತಿಹಾಸ ಹೊಂದಿರುವ ಉದ್ಬವ ಮೂರ್ತಿ ಬಸವೇಶ್ವರನಿಗೆ ವರುಣನ ಕೃಪೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಸಿದ ದಿನದಂದೇ ಮಳೆಯಾಗಿರುವ ಕುರುಹುಗಳಿವೆ. ಗೇಟಿ ಬಸವಣ್ಣ ಎಂದು ಖ್ಯಾತಿ ಗಳಿಸಿರುವ ದೇವಸ್ಥಾನದಲ್ಲಿ ಮಳೆಯ ಅಭಾವದ ವರ್ಷ ರುದ್ರಾಭಿಷೇಕ ಸಲ್ಲಿಸುವ ಪರಂಪರೆ ನೆಡೆದು ಬಂದಿದೆ. ಬಸವೇಶ್ವರನಿಗೆ ಇತರೆ ದಿನಗಳಲ್ಲಿ ವಿಶೇಷ ಪೂಜೆಗಳು ನೆಡೆಯುತ್ತವೆ ಎಂದು ಸಮಿತಿಯ ಅಧ್ಯಕ್ಷ ಟಿ.ಎಚ.ಎಂ. ಶಿವಾನಂದಯ್ಯ ತಿಳಿಸಿದರು.

      ರುದ್ರಾಭಿಷೇಕ ಮಾಡುವ ಯೋಚನೆ ಮಾಡಿದ ದಿನದಂದೇ ತಿಂಗಳಿನಿಂದಲೂ ಆಗದಿದ್ದ ಮಳೆ ಸುರಿದಿರುವುದು ಗೇಟಿ ಬಸವೇಶ್ವರನ ಆಶೀರ್ವಾದ ದೊರೆತಂತಿದೆ. ಸಂಕಲ್ಪವನ್ನು ನೆರವೇರಿಸಿರುವುದು ಇತಿಹಾಸದಿಂದ ನೆಡೆದು ಬಂದಿದೆ ಎಂದು ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಹೇಳಿದರು.

      ಪರವು ಮಾದರಿಯಲ್ಲಿ ಅಭಿಷೇಕ ಪೂಜೆಯನ್ನು ಸೋಮವಾರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೂ ನೆರವೇರಿಸಿದ ನಂತರ ಮದ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನೆಡೆಯಿತು.

       

LEAVE A REPLY

Please enter your comment!
Please enter your name here