ಮಹಾಧನ್ ಸ್ಮಾರ್ಟೆಕ್ 10:26:26 ಮತ್ತು 12:32:16 ಶ್ರೇಣಿಯ ಕ್ರಾಂತಿಕಾರಕ ರಸಗೊಬ್ಬರ ಬಳ್ಳಾರಿಯಲ್ಲಿ ಬಿಡುಗಡೆ

0
94

ಬಳ್ಳಾರಿ:

      ಸ್ಮಾರ್ಟ್‍ಕೆಮ್ ಟೆಕ್ನಾಲಜೀಸ್ ಲಿಮಿಟೆಡ್ ಸಾಮಾನ್ಯ ರಸಗೊಬ್ಬರಗಳಿಗಿಂತ ಅಧಿಕ ಫಲಿತಾಂಶ ನೀಡುವ ವಿಶೇಷ ರಸಗೊಬ್ಬರ ಮಹಾಧನ್ ಸ್ಮಾರ್ಟೆಕ್ 10:26:26 ಮತ್ತು 12:32:16 ಗ್ರೇಡ್‍ನಲ್ಲಿ ಬಿಡುಗಡೆ ಮಾಡಿದೆ.

      ಕೃಷಿ ಕ್ಷೇತ್ರದಲ್ಲಿ ಬಿತ್ತನೆ ಬೀಜ, ಸಲಕರಣೆ, ಕೃಷಿ ಸುಧಾರಣೆಯ ಸುತ್ತ ಸಂಶೋಧನೆಗಳು ನಡೆಯುತ್ತಲೇ ಇವೆ ಆದರೆ ಮುಖ್ಯವಾದ ರಸಗೊಬ್ಬರ ಸಂಶೋಧನೆಗೆ ಆದ್ಯತೆ ಕಡಿಮೆ. ಮಣ್ಣಿನ ಸಾರವನ್ನು ಹೆಚ್ಚಿಸುವ ಗೊಬ್ಬರವನ್ನು ಆವಿಷ್ಕರಿಸಲು ಸ್ಮಾರ್ಟ್‍ಕೆಮ್ ಟೆಕ್ನಾಲಜೀಸ್ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ವಿಸ್ತತ ಶ್ರೇಣಿಯ ವಿನೂತನ ಮುಂದಿನ ಪೀಳಿಗೆಯ ರಸಗೊಬ್ಬರವನ್ನು ರೈತರಿಗೆ ನೀಡಲ ಮುಂದಾಗಿದೆ. ರಾಸಾಯನಿಕ ಗೊಬ್ಬರಕ್ಕೆ ಸ್ಮಾರ್ಟೆಕ್ ತಂತ್ರಜ್ಞಾನವನ್ನು ಬಳಸಿ ಸಾವಯವ ಗೊಬ್ಬರವನ್ನು ಲೇಪಿಸಿರುವ ವಿಶೇಷ ಗೊಬ್ಬರ ಇದಾಗಿದ್ದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಗಳ ಬೇರುಗಳನ್ನು ಬಲಗೊಳಿಸಿ ಮಣ್ಣಿನ ಸಾರ ಹೆಚ್ಚು ಹೀರುವಂತೆ ಬೇರುಗಳನ್ನು ಸಜ್ಜುಗೊಳಿಸುತ್ತದೆ, ಸಾವಯವ ಇಂಗಾಲ ಮತ್ತು ಖನಿಜಯುಕ್ತ ಅಂಶಗಳನ್ನು ರಸಗೊಬ್ಬರದ ಹರಳುಗಳಲ್ಲಿ ಸವರಲಾಗಿದೆ, ಇದು ಸಾಮಾನ್ಯ ಗೊಬ್ಬರಗಿಂತ ಕನಿಷ್ಠ ಶೇ 25ರಷ್ಟು ಅಧಿಕ ಪರಿಣಾಮಕಾರಿಯಾಗಬಲ್ಲದು ಹಾಗೂ ಹೆಚ್ಚು ಇಳುವರಿಯನ್ನು ನೀಡುವುದರ ಜೊತೆಗೆ ಬೆಳೆಗಳ ಗುಣಮಟ್ಟವು ಹೆಚ್ಚಾಗಲಿದೆ ಎಂದು ಬೆಳೆ ಪೌಷ್ಟಿಕಾಂಶ ವಹಿವಾಟು ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಅರವಿಂದ್ ಕುಲಕರ್ಣಿ ತಿಳಿಸಿದ್ದರು. ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು ರಸಗೊಬ್ಬರಳಿಗೆ ಬೇಡಿಕೆಯೂ ಶೇ 10ರಷ್ಷು ಹೆಚ್ಚಾಗಿದೆ, ಕಳೆದ ಹಂಗಾಮಿನಲ್ಲಿ ಕಂಪನಿಯು ಕರ್ನಾಟಕದಲ್ಲಿ 60 ಸಾವಿರ ಟನ್ ರಸಗೊಬ್ಬರ ಮಾರಾಟ ಮಾಡಿತ್ತು. ಈ ವರ್ಷ ಮಹಾಧನ್ ಸ್ಮಾರ್ಟೆಕ್ 10:26:26 ಮತ್ತು 12:32:16 ಗ್ರೇಡ್ ನೂತನ ರಸಗೊಬ್ಬರ ದೊಂದಿಗೆ 1.10 ಲಕ್ಷ ಟನ್ ರಸಗೊಬ್ಬರ ರೈತರಿಗೆ ನೀಡುವ ನಿರೀಕ್ಷೆ ಇದೆ ಎಂದರು. ಮಹಾಧನ್ ಸ್ಮಾರ್ಟೆಕ್ ರಸಗೊಬ್ಬರ 10:26:26 ಮತ್ತು 12:32:16 ಶ್ರೇಣಿಯು ಕ್ರಾಂತಿಕಾರಕವಾಗಿದ್ದು! ಅಸಂಪ್ರದಾಯಿಕ ರಸಗೊಬ್ಬರ ಎನಿಸಿಕೊಂಡಿವೆ ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದು ಎಂದು ವಿವರಿಸಿದರು.

 

LEAVE A REPLY

Please enter your comment!
Please enter your name here