ಮಹಿಳಾ ಕಾಲೇಜು ಅಭಿವೃದ್ಧಿಯಲ್ಲಿ ಚಂದ್ರಪ್ಪರ ಪಾತ್ರ ದೊಡ್ಡದು

0
29

ಪಾವಗಡ
ಮಹಿಳಾ ಪ್ರಥಮ ದರ್ಜೆ ಕಾಲೇಜನ್ನು ಅಭಿವೃದ್ದಿ ಪಡಿಸುವಲ್ಲಿ ಪ್ರಾಂಶುಪಾಲ ಚಂದ್ರಪ್ಪರ ಸೇವೆ ಅಪಾರವಾದುದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ಅವರು ಶನಿವಾರ ಪಟ್ಟಣದ ಮಹಿಳಾ ಪ್ರಥಮದರ್ಜೇ ಕಾಲೇಜಿನ 2017-18 ನೇ ಸಾಲಿನ ವಾರ್ಷಿಕ ಸಂಚಿಕೆ `ಪಾವನಿ’ ಬಿಡುಗಡೆ ಹಾಗೂ ನಿವೃತ್ತ ಪ್ರಾಂಶುಪಾಲ ಚಂದ್ರಪ್ಪ ಮತ್ತು ಅಧೀಕ್ಷಕ ನಟರಾಜುರವರ ಬೀಳ್ಕೊಡುಗೆಯಲ್ಲಿ ಮಾತನಾಡುತ್ತಿದ್ದರು. ಕಾಲೇಜು ಕ್ಷೇಮಾಭಿವೃದ್ದಿ ಸಂಘ ಸ್ಥಾಪಿಸಿ ಅದರ ಮೂಲಕ ಬಡ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಕಾರಣೀಭೂತರಾಗಿದ್ದಾರೆ. ಮಹಿಳಾ ಪ್ರಥಮದರ್ಜೆ ಕಾಲೇಜು ಮಂಜೂರಾದಾಗ ಅನೇಕ ಸಮಸ್ಯೆಗಳಿದ್ದವು. ಅವುಗಳನ್ನು ಹೋಗಲಾಡಿಸಿ, ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿ 15ಎಕರೆ ಜಮೀನು ಮಂಜೂರಾಗಲು ಪ್ರಾಂಶುಪಾಲ ಚಂದ್ರಪ್ಪರ ಸೇವೆ ಅನನ್ಯವಾಗಿದೆ ಎಂದು ಕೊಂಡಾಡಿದರು.

 

ಪಾವಗಡಕ್ಕೆ ನೂತನವಾಗಿ ಮಹಿಳಾ ಕಾಲೇಜ್ ಮಂಜೂರಾದಾಗ ಕಾಲೇಜ್ ನಡೆಸಲು ಯಾವುದೇ ಸೌಲಭ್ಯವಿರಲಿಲ್ಲ. ಅಂತಹ ಸಮಯದಲ್ಲಿ ದಾನಿಗಳಿಂದ ಕಾಲೇಜ್‍ಗೆ ಶೈಕ್ಷಣಿಕ ಸಾಮಗ್ರಿಗಳು, ಕಟ್ಟಡಗಳ ನಿರ್ಮಾಣ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ಬಡ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲು ಅವರು ಪಟ್ಟ ಶ್ರಮ ಮರೆಯಲಾಗದು, ಇವರು ನಿವೃತ್ತಿ ಹೊಂದುತ್ತಿರುವುದು ನನಗಂತೂ ನೋವುಂಟು ಮಾಡಿದೆ ಎಂದರು.

ಪ್ರಾಂಶುಪಾಲ ಚಂದ್ರಪ್ಪ ಸಲಹೆ ಮೇರೆಗೆ ತಾವು ಶಾಸಕರಾಗಿದ್ದಾಗ ಕಾಲೇಜು ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಮೂಲಕ ಒಂದೇ ವರ್ಷದಲ್ಲಿ 2.50 ಲಕ್ಷ ರೂ.ನಲ್ಲಿ 2 ಲಕ್ಷ ರೂ. ಕಾಲೇಜು ಪ್ರಗತಿಗೆ ಬಳಸಿ, ಸುಮಾರು 50 ಸಾವಿರ ರೂ.ನಲ್ಲಿ ಪುಸ್ತಕ, ಬ್ಯಾಗ್, ಶುಲ್ಕ ಕಟ್ಟಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅನುವು ಮಾಡಿಕೊಟ್ಟಿದ್ದೆ ಎಂದರು.
ಲಂಡನ್‍ನ್ ಡಾ. ಪ್ರಭಾಕರರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಉಳಿತಾಯ ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳಿಗೆ ನೀವೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿ ತಿಂಗಳು ದಿನವೊಂದಕ್ಕೆ 1 ರೂ. ನಂತೆ ತಿಂಗಳಿಗೆ 30 ರೂ ಉಳಿತಾಯ ಮಾಡಿದರೆ ಕಾಲೇಜು ಅಭಿವೃದ್ದಿ ಶುಲ್ಕದ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡ ಬಹುದು. ಚಂದ್ರಪ್ಪರವರು ಈ ಕಾಲೇಜಿನಿಂದ ವಿದ್ಯಾರ್ಥಿ ಶುಲ್ಕ 3 ಲಕ್ಷರೂ. ಸಂಗ್ರಹಿಸಿದ್ದು, ಅದರಲ್ಲಿ 50 ಸಾವಿರ ರೂ. ಕಾಲೇಜಿನ ಬಡ ವಿದ್ಯಾರ್ಥಿಗಳ ಶುಲ್ಕ ಹಾಗೂ ಪುಸ್ತಕಗಳಿಗೆ ನೀಡಿರುವುದು ಅತ್ಯಂತ ಸ್ವಾಗತಾರ್ಹ ಎಂದರು.

ಆಂಗಡಿನಾಡು ಕ.ಸಾ.ಪ.ಅಧ್ಯಕ್ಷ ಹ.ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಸಣ್ಣರಾಮರೆಡ್ಡಿ, ಪ್ರಭಾರಿ ಪ್ರಾಂಶುಪಾಲ ಮಾರಣ್ಣ, ರಾಜ್ಯ ಕಿಸಾನ್ ಸಂಘದ ಅಧ್ಯಕ್ಷ ವಿ. ನಾಗಭೂಷಣರೆಡ್ಡಿ, ಕ.ಸಾ.ಪ ಅಧ್ಯಕ್ಷ ಆರ್. ಟಿ.ಖಾನ್ ಮಾತನಾಡಿದರು.

ಸರ್ವಧರ್ಮಶಾಂತಿ ಪೀಠದ ಅಧ್ಯಕ್ಷ ಸಿದ್ದಾಪುರ ರಾಮಮೂರ್ತಿ ಒಂದು ಅನಾಥ ಹೆಣ್ಣು ಮಗುವಿಗೆ ಸೈಕಲ್ ವಿತರಿಸಿದರು.
ರೋಟರಿ ಸಂಸ್ಥೆಯಿಂದ ಮಹಮದ್‍ಇಮ್ರಾನ್, ನಂದೀಶ್ ಬಾಬು, ಹೆಲ್ಪ್ ಸೊಸೈಟಿಯಿಂದ ಮಾನಂ ಶಶಿಕಿರಣ್, ನಮ್ಮಹಕ್ಕು ಸಂಸ್ಥೆಯಿಂದ ಗಿರಿಪ್ಯಾಶನ್‍ನ ಗಿರಿ, ಚಿನ್ಮಯ ಸಂಸ್ಥೆಯಿಂದ ಸತ್ಯಲೋಕೇಶ್, ಎಚ್.ರಾಮಾಂಜಿನಪ್ಪ, ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಕೇಂದ್ರದ ಸಿ.ಇ.ಒ. ಶ್ರೀಧರ್ ಗುಪ್ತ ಮತ್ತಿತರ ಸಂಘಸಂಸ್ಥೆಗಳ ಪ್ರತಿನಿಧಿಗಳು ಪ್ರಾಂಶುಪಾಲ ಚಂದ್ರಪ್ಪ ದಂಪತಿ ಹಾಗೂ ಮಕ್ಕಳನ್ನು ಹಾಗೂ ಅಧೀಕ್ಷಕ ನಟರಾಜ್ ದಂಪತಿಗಳನ್ನು ಸನ್ಮಾನಿಸಿದರು.\

ನಿವೃತ್ತ ದೈಹಿಕ ಶಿಕ್ಷಕ ಮೈಲಪ್ಪ, ರೋಟರಿ ಮಾಜಿ ಅಧ್ಯಕ್ಷರಾದ ಗೊರ್ತಿನಾಗರಾಜು, ಕನ್ನಮೇಡಿಲೋಕೇಶ್, ಉಪನ್ಯಾಸಕರಾದ ರೇಣುಕಾಪ್ರಸಾದ್, ಕಿರಣ್, ಮಧುಕುಮಾರ್, ಗ್ರೇಡ್-2 ತಹಸೀಲ್ದಾರ್ ಹನುಮಂತರಾಯ ಮತ್ತು ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

LEAVE A REPLY

Please enter your comment!
Please enter your name here