ಮಾಧ್ಯಮಗಳ ಕ್ಯಾಮೆರಾಗೆ ಅಡ್ಡನಿಂತ ಪೊಲೀಸರು..! ಸಿಎಂ ಆದೇಶ..?

0
70

ಮಂಡ್ಯ:

      ಮುಖ್ಯಮಂತ್ರಿ ಆದಮೇಲೆ ಪದೇ ಪದೇ ಮಾಧ್ಯಮಗಳ ಮೇಲೆ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಸಿಎಂ, ಇಂದು ಒಂದು ಹಂತ ಮುಂದೆ ಹೋಗಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಪೊಲೀಸರನ್ನು ಅಡ್ಡಲಾಗಿ ನಿಲ್ಲುವಂತೆ ಮಾಡಿದ್ದಾರೆ.

      ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಸಿಎಂ ಇಂದು ಭಾಗವಹಿಸಿದ್ದರು, ಕಾರ್ಯಕ್ರಮದ ವರದಿಗೆಂದು ಮಾಧ್ಯಮಗಳು ಸ್ಥಳಕ್ಕೆ ತುಲುಪಿದ್ದವು. ಈ ವೇಳೆ ಪೊಲೀಸರು ಮಾಧ್ಯಮಗಳ ಕ್ಯಾಮೆರಾಕ್ಕೆ ಅಡ್ಡ ನಿಲ್ಲುವಂತೆ ಸಿಎಂ ಮೌಖಿಕವಾಗಿ ಸೂಚಿಸಿದ್ದರು ಎನ್ನಲಾಗಿದೆ.

      ನಿನ್ನೆಯಷ್ಟೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ನಾನು ಮಾಧ್ಯಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ’ ಎಂದಿದ್ದರು, ಇಂದು ಅದನ್ನು ಪೊಲೀಸರ ಮೂಲಕ ಜಾರಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here