ಮಾಧ್ಯಮಗಳ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ : ಸಿ.ಎಂ.

0
44

 ಬೆಂಗಳೂರು:

      ಮಾಧ್ಯಮಗಳ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ.

      ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ಮೂರು-ನಾಲ್ಕು ಜಿಲ್ಲೆಗಳ ಮುಖ್ಯಮಂತ್ರಿ ಅಲ್ಲ, ನಾನು ರಾಜ್ಯದ 30 ಜಿಲ್ಲೆಗಳ ಮುಖ್ಯಮಂತ್ರಿ. ಕೆಲವರಿಗೆ ಈ ಸರ್ಕಾರ ಬಂದಿರುವುದು ಇಷ್ಟವಿಲ್ಲ.ಮಾಧ್ಯಮಗಳೂ ಕೂಡಾ ಈ ಬಗ್ಗೆ ನನ್ನನ್ನು ಟೀಕೆ ಮಾಡಿವೆ. ಆದರೂ ಉತ್ತರ ಕರ್ನಾಟಕಕ್ಕೂ ಆಧ್ಯತೆ ನೀಡಿದೇನೆ. ಮುಂದಿನ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಒಂದೊಂದು ಜಿಲ್ಲೆಯಲ್ಲೂ ಎರಡು ದಿವಸ ಇರುತ್ತೇನೆ . ಜನರ ಮಧ್ಯೆ ಕಂದಕ ಉಂಟು ಮಾಡ ಬೇಡಿ.ರೈತರ 49 ಸಾವಿರ ರೂ.ಗಳ ಕೋಟಿ ಹಣವನ್ನು ಮನ್ನಾ ಮಾಡಿದ್ದೇನೆ.

      ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ಕೆಲ ಮಾಧ್ಯಮಗಳು ಮಿಸ್‍ಲೀಡ್ ಮಾಡುತ್ತಿವೆ. ಕಚೇರಿಯಲ್ಲಿ ಕಾಲ ಕಳೆಯುವ ಬದಲು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.

      ನಿಮಗೆ ಯಾವ ಸೌಲಭ್ಯ ಬೇಕೋ ಕೇಳಿ ಅದಕ್ಕೆ ಸ್ಪಂದಿಸಿ ವ್ಯವಸ್ಥೆ ಮಾಡುತ್ತೇನೆ,ನೀವು ಯಾವುದಕ್ಕೂ ಹೆದರಬೇಡಿ ನಿಮ್ಮ ರಕ್ಷಣೆಗೆ ನಾನಿದ್ದೇನೆ. ಈ ಸಮ್ಮಿಶ್ರ ಸರ್ಕಾರ ಯಾವುದೇ ಸಮಸ್ಯೆಗಳಿದ್ದರೂ ಸ್ಪಂದಿಸಿ. ಅದನ್ನು ಸರಿಪಡಿಸುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here