ಮಾರುಕಟ್ಟೆಗೆ ಬಂದ ವಿವಿಧ ವಿನ್ಯಾಸದ ಪರಿಸರ ಸ್ನೇಹಿ ಗಣಪ

0
59

ತಿಪಟೂರು :

           ದರ ಏರಿಕೆ, ಬರಗಾಲದ ನಡುವೆಯು ಗಣೇಶನ ಪ್ರತಿಷ್ಠಾಪನೆಗೆ ಸಕಲ ಸಿದ್ದತೆಮಾಡಿ ಕೊಳ್ಳುತ್ತಿರುವ ಜನರನ್ನು ನಾವು ಕಾಣಬಹುದು. ಈ ಬಾರಿಯ ಗಣೇಶ ಹಬ್ಬವನ್ನು ಮಾಡಲು ಯುವಕರು ಉತ್ಸಾಹದಿಂದ ಗಣೇಶನ ಮೂರ್ತಿಗಳನ್ನು ತೆಗೆದುಕೊಂಡು ಹೋಗುವಲ್ಲಿ ಮಗ್ನರಾಗಿದ್ದರು.

          ಬಾಲಗಂಗಾಧರ ತಿಲಕ್‍ರವರು ಭಾರತಕ್ಕೆ ಸ್ವಾತಂತ್ರ್ಯಪಡೆಯಲು ಜನರನ್ನು ಒಂದುಗೂಡಿಸುವ ಸಲುವಾಗಿ ಆರಂಭವಾದ ಗಣೇಶನ ಪ್ರತಿಷ್ಠ್ಠಾಪನೆಯು ಇಂದು ಒಂದು ಸಂಪ್ರದಾಯದಂತೆ ಯುವಕರ ತಂಡಗಳು, ದೇವಾಲಯಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲು ಕೊಂಡು, ವಾಹನಗಳಲ್ಲಿ ಖುಷಿಯಿಂದ ಸಾಗಿಸುತ್ತಿದ್ದರು.

          ಗಣೇಶನ ಮೂರ್ತಿಯ ತಯಾರಕರಾದ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಧನಜಯರವರು ಹೇಳುವಂತೆ ಈ ಬಾರಿಯು ಗಣಪತಿಯನ್ನು ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ, ಆದರೆ ಚಿಕ್ಕಮಕ್ಕಳು ಅಣ್ಣ ನಾವು ಗಣಪತಿಯನ್ನು ಕೂರಿಸುತ್ತಿದ್ದೇವೆಂದು ಬರುತ್ತಾರೆ ಅವರು ಕೊಟ್ಟು ಪುಡಿಗಾಸೆ ನಮಗೆ ಸಾವಿರಾರು ರೂಗಳಾಗುತ್ತವೆ ಆದ್ದರಿಂದ ನಾವು ಹೆಚ್ಚು ಕೇಳದೆ ಕೊಟ್ಟುಕಳುಹಿಸುತ್ತೇವೆ.

LEAVE A REPLY

Please enter your comment!
Please enter your name here