ಮಿಡಿಗೇಶಿ ಊರು ಮಾರಮ್ಮದೇವಿಗೆ ದೀಪೋತ್ಸವ ಯಶಸ್ವಿ ಕಾರ್ಯಕ್ರಮ

0
25

 ಮಿಡಿಗೇಶಿ:

      ಬಹಳಷ್ಟು ವರ್ಷಗಳಿಂದಲೂ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿನ ಗ್ರಾಮದೇವತೆ ಊರು ಮಾರಮ್ಮ ದೇವಿಗೆ ದೀಪೋತ್ಸವ ಕಾರ್ಯಕ್ರಮವನ್ನು ಆಚರಿಸದೇ ಇದ್ದು ಈ ದಿನ ಆಷಾಡ ಮಾಸದ ಜುಲೈ 31 ರ ಮಂಗಳವಾರ ದಿನ ದಂದು ಬೆಳಿಗ್ಗೆಯಿಂದಲೇ ಮಿಡಿಗೇಶಿ ಗ್ರಾಮಸ್ಥರು ಮಾತ್ರ ಗ್ರಾಮದಲ್ಲಿ ಕೆಲವರು ಗ್ರಾಮಸ್ಥರು ವಿವಿಧ ಕಾರಣಗಳಿಂದ ಮಾರಮ್ಮದೇವಿಗೆ ದೀಪೋತ್ಸವ ಮಾಡಿರುವುದಿಲ್ಲ. ಉಳಿದಂತೆ ಗ್ರಾಮಸ್ಥರು ಶ್ರದ್ದಾ ಭಕ್ತಿಯಿಂದ ಆರತಿಗೆ ವಿವಿಧ ರೀತಿಯ ಹೂಗಳು, ಪುಷ್ಪ ಗುಚ್ಚಗಳನ್ನು ಸಿಂಗರಿಸಿಕೊಂಡು ಮಹಿಳೆಯರು ಬಹಳ ಸಂಭ್ರಮದ ದೀಪೋತ್ಸವ ಆಚರಿಸಿದ್ದು ವಿಶೇಷವಾಗಿತ್ತು.

      ಸದರಿ ಶ್ರೀಊರು ಮಾರಮ್ಮ ದೇವಿಗೆ ಆರತಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಸದರಿ ಶ್ರೀ ಊರು ಮಾರಮ್ಮದೇವಿ ಆರತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿವೃತ್ತ ಜಿಲ್ಲಾಧಿಕಾರಿಗಳು, ಹಾಲಿ ಮಧುಗಿರಿ ವಿಧಾನಸಭಾ ಶಾಸಕರಾದ ಎಂ ವಿ ವೀರಭದ್ರಯ್ಯನವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಕಾಂಗೇಸ್ ನ ಭದ್ರಕೋಟೆಯಾಗಿತ್ತು ಆದರೆ ಈ ಬಾರಿ ಜೆ ಡಿ ಎಸ್ ಪಕ್ಷಕ್ಕೆ ಬೆಂಬಲ ನೀಡಿದಕ್ಕೆ ಕೃತಜ್ಞತೆ ತಿಳಿಸಿದರು.

      ಇದೇ ಸಂದರ್ಭದಲ್ಲಿ ಮಿಡಿಗೇಶಿ ಸಾರ್ವಜನಿಕ ಗ್ರಂಥಾಲಯ ಗ್ರಾಮಪಂಚಾಯಿತಿ ಗ್ರಂಥಾಲಯ ತುಂಬಾಹಳೆಯ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸದರಿ ಕಟ್ಟಡಗಳ ಮೇಲ್ಚಾವಣಿ ದುರಸ್ಥಿಯಲ್ಲಿದ್ದು ಸೋರುತ್ತಿದ್ದು ಗ್ರಂಥಾಲಯದಲ್ಲಿನ ಪುಸ್ತಕಗಳು ಪತ್ರಿಕೆಗಳು ಇನ್ನು ಮುಂತಾದ ಪರಿಕರಗಳು ಮಳೆಬಂದಾಗ ನೆನೆದು ಹಾಳಾಗುತ್ತಿರುವ ಬಗ್ಗೆ ಗ್ರಂಥಪಾಲಕ ರಾಜುರವರು ಶಾಸಕರ ಗಮನಕ್ಕೆ ತಂದಿದ್ದರಿಂದ ಶಾಸಕರು ಸ್ಥಳದಲ್ಲೆ ಇದ್ದಂತಹ ಪಿ ಡಿ ಓ ಗೌಡಪ್ಪರವರಿಗೆ ಸ್ಥಳದಲ್ಲೆ ಗ್ರಾಮಪಂಚಾಯಿತಿಗ ಸಂಬಂದಿಸಿದ ಸ್ಥಳದಲ್ಲಿಯೆ ಗ್ರಾಮ ಪಂಚಾಯಿತಿಗೆ ಸಂಬಂದಿಸಿದ ಕೊಠಡಿಯೊಂದನ್ನು ಬಿಟ್ಟುಕೊಡುವಂತೆ ಆದೇಶಿಸಿದರು.ಸದರಿ ಸಾರ್ವಜನಿಕ ಗ್ರಂಥಾಲಯಕ್ಕೆ ವ್ಯವಸ್ಥಿತ ಕಟ್ಟಡವೊಂದನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಎ ಪಿ ಎಂ ಸಿ ನಿರ್ದೇಶಕ ತಿಮ್ಮರಾಯಪ್ಪ, ಎಂ ಎಸ್ ಸುರೇಶ್, ನಿ,ಶಿ ಶಿವಕುಮಾರ, ರಾಜಗೋಪಾಲ್, ಎಂ ಆರ್ ಲಕ್ಷ್ಮಿನರಸಯ್ಯ, ಸಂಜೀವಯ್ಯ, ರಂಗಶಾಮಣ್ಣ, ಮಲ್ಲಣ್ಣ, ಮಧು, ಈಶ್ವರಪ್ಪ, ಹನುಮಂತೇಗೌಡ,ನಾಣಿ, ಎಂ ವಿ ನಾಗರಾಜು, ಬಸವರಾಜು,ಸುಕನ್ಯಾವಿಜಯಕುಮಾರ್, ಮಾಳಪ್ಪ,ನಾಗೆಂದ್ರ, ರಾಮಾಂಜನೇಯ, ರವಿ,ಸಿದ್ದೇಶ್ ಗ್ರಾಮದ ಶ್ಯಾನುಬೋಗರ ಎಂ ಎನ್ ಮೊಹನರಾವ್ ಎಂ ಎಸ್ ವೆಂಕಟೇಶಮೂರ್ತಿ ನಾಗರಾಜು ಸೇರಿದಂತೆ ಗ್ರಾಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here