ಮಿಡಿಗೇಶಿ ಹೋಬಳಿಯ ವಿವಿಧ ದೇವಾಲಯಗಳಲ್ಲಿ ಕಡೇ ಶ್ರಾವಣಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳು

0
27

ಮಿಡಿಗೇಶಿ
              ಇಂದು ಶ್ರಾವಣಮಾಸದ ಕೊನೆಯ ಶ್ರಾವಣ ಶನಿವಾರವಾಗಿದ್ದು ಎಲ್ಲೆಡೆ ದೇವಾಲಯಗಳಲ್ಲಿ ಸ್ವಾಮಿಯವರಿಗೆ ಹೂವಿನ ಅಲಂಕಾರ, ವಿಳ್ಯದೆಲೆಯ ಪೂಜೆ, ಭಕ್ತ ಮಹಾಶಯರುಗಳಲ್ಲಿ ಅನ್ನ ಸಂತರ್ಪಣೆ, ರಾತ್ರಿಯಲ್ಲಿ ಭಜನಾ ಕಾರ್ಯಕ್ರಮಗಳು ನೆಡೆಯುತ್ತವೆ. ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಶನೈಶ್ವರ ಸ್ವಾಮಿಗೆ ಸೆ.6 ರಿಂದ ಸೆ 9 ನೇ ತಾರೀಕಿನವರೆಗೆ ಮೂರುದಿನಗಳ ಕಾಲ ವಿವಿಧ ರೀತಿಯ ಶಾಸ್ತ್ರೋಕ್ತಗಳೊಂದಿಗೆ ಪೂಜಾಕಾರ್ಯಕ್ರಮಗಳು. ಕಡೆಯ ಶ್ರಾವಣ ಶನಿವಾರ (ಸೆ.8 ರಂದು) ಅನ್ನ ಸಂತರ್ಪಣಾ ಕಾರ್ಯಕ್ರಮ ಈ ಭಾಗದ ಅಕ್ಕ-ಪಕ್ಕದ ಗ್ರಾಮಸ್ಥರು ಒಮ್ಮತದಿಂದ ನೆರವೇರಿಸಲಾಯಿತು. ಇದೇ ದಿನ ಮಿಡಿಗೇಶಿ ಹೋಬಳಿಯ ನೀರಕಲ್ಲು ಗ್ರಾಮ ಹಾಗೂ ನೀರಕಲ್ಲು ಗೋಲ್ಲರಹಟ್ಟಿಯ ಗ್ರಾಮಸ್ಥರಿಂದ ಗ್ರಾಮದ ಹೊರ ವಲಯದಲ್ಲಿನ 1 ಕಿ.ಮೀ ದೂರದಲ್ಲಿನ ಶ್ರೀ ರಾಮ ದೇವರಿಗೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ವಿಶೇಷವಾಗಿ ನೆರವೇರಿಸಲಾಯಿತು. ಹಾಗೂ ಬಯಲಾಂಜನೇಯ ಸ್ವಾಮಿ ದೇವಸ್ಥ್ಥಾನದಲ್ಲಿ ನಲ್ಲೇಕಾಮನಹಳ್ಳಿ, ನಾರಪ್ಪನಹಳ್ಳಿ ಬೇಡತ್ತೂರು, ಬಿದರಕೆರೆ, ಗ್ರಾಮಸ್ಥರುಗಳವರು ಒಟ್ಟಾರೆಸೇರಿ ಶ್ರೀ ವೀರಾಂಜನೇಯ ಸ್ವಾಮಿಗೆ ಮಿಡಿಗೇಶಿ ಮಂಜಣ್ಣ ಹಾಲಿನ ಡೈರಿ ಕಾರ್ಯದರ್ಶಿ ರವರ ಕುಟುಂಬ ಹಾಗೂ ಮಿಡಿಗೇಶಿ ಜಂಗಮಯ್ಯನ ಪಾಳ್ಯ ನಲ್ಲೇಕಾಮನಹಳ್ಳಿ ಗ್ರಾಮಸ್ಥರಿಂದ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಬಹಳ ವಿಜೃಂಬಣೆಯಲ್ಲಿ ನೆರವೇರಿಸಲಾಯಿತು.                 ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಬೆನಕನಹಳ್ಳಿಯಲ್ಲಿ ಬೊಡ್ಡುಕಲ್ಲು ಪ್ರತಿಪ್ಠಾಪನಾ ಮಹೋತ್ಸವದ ಅಂಗವಾಗಿ ಬೊಡ್ಡು ಕಲ್ಲಿಗೆ ಆರತಿ, ಮಾರಮ್ಮ ದೇವಿಗೆ ಆರತಿ, ಕಸಬಾ ಹೋಬಳಿಗೆ ಸೇರಿದ ಕಮ್ಮನಕೋಟೆ ಗ್ರಾಮದಲ್ಲಿನ ಶ್ರೀ ಮುತ್ತರಾಯ ಸ್ವಾಮಿಗೆ ದಿಪೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು ತಿಪ್ಪಗೊಂಡನಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಡ್ಡರಹಟ್ಟಿ ಗ್ರಾಮಸ್ಥರಿಂದ ದೀಪೋತ್ಸವ, ಹೊಸಕೆರೆ ಗ್ರಾಮದಲ್ಲಿ ಶ್ರೀ ಶನೈಶ್ವರ ಸ್ವಾಮಿಗೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು.

LEAVE A REPLY

Please enter your comment!
Please enter your name here