ಮುಂದಿನ ಒಂದು ವಾರದಲ್ಲಿವೃಕ್ಷ ಪ್ರಾಧಿಕಾರ ರಚನೆಗೆ ಕಾಲಮಿತಿ: ಜ್ಯೋತಿಗಣೇಶ್

0
25

   ತುಮಕೂರು ಹಸಿರು ತುಮಕೂರು ಯೋಜನೆಗೆ ಮಾಸ್ಟರ್ ಪ್ಲಾನ್; ತುಮಕೂರುನಗರ ವಿಧಾನಸಭಾಕ್ಷೇತ್ರ ಅಧ್ಯಯನ ಕೇಂದ್ರದ ಸಭೆ; ವೈಜ್ಞಾನಿಕವಾಗಿ ಹಸಿರು ಬೆಳೆಸಲು ಸಲಹೆ
ತುಮಕೂರು: ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸುವ ಹಸಿರು ತುಮಕೂರು ಯೋಜನೆಗೆ ಅಧಿಕಾರಿಗಳು ಶೀಘ್ರವಾಗಿ ಸಮರ್ಪಕ ಮಾಸ್ಟರ್ ಪ್ಲಾನ್ ತಯಾರಿಸಬೇಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚಿಸಿದರು.
ಶಾಸಕರ ಕಚೇರಿಯಲ್ಲಿ ಸೋಮವಾರ ಈ ಕುರಿತು ನಡೆದ ತುಮಕೂರು ನಗರ ಅಧ್ಯಯನ ಕೇಂದ್ರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಗರದಲ್ಲಿ ಈ ವರ್ಷ ಸ್ಮಾರ್ಟ್‍ಸಿಟಿಯಿಂದ 11 ಸಾವಿರ ಗಿಡಗಳನ್ನು, ಟೂಡಾದಿಂದ 5 ಸಾವಿರ ಗಿಡಗಳು ಸೇರಿದಂತೆ ಹಸಿರು ತುಮಕೂರು ಆಂದೋಲನ ರೂಪಿಸಿ ಸಾರ್ವಜನಿಕರ ಸಹಭಾಗಿತ್ವದಲ್ಲಿಗಿಡ ನೆಟ್ಟು ಪೋಷಿಸಬೇಕು.ನಗರಾದ್ಯಂತ್ಯ ಈ ಬಗ್ಗೆ ಪ್ರಚಾರಕೈಗೊಂಡುಜನರು ಹೇಳುವ ಗಿಡಗಳನ್ನು ಅರಣ್ಯ, ತೋಟಗಾರಿಕೆ, ಆಯುಷ್, ಕೃಷಿ ವಿಜ್ಞಾನಕೇಂದ್ರವು ಬೆಳೆಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

     ನಗರದಲ್ಲಿಯಾವ್ಯಾವಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆಡಿಜಿಟಲ್ ಮೂಲಕ ದೊರಕಿಸಬೇಕುಎಂಬುದು ನಮ್ಮಉದ್ದೇಶ. ಈ ನಿಟ್ಟಿನಲ್ಲಿ ಹಸಿರು ತುಮಕೂರುಯೋಜನೆಗೆ ಸಂಬಂಧಿಸಿದಂತೆ ಪಾಲಿಕೆ, ಸ್ಮಾರ್ಟ್ ಸಿಟಿ, ಟುಡಾ, ಅರಣ್ಯ ಇಲಾಖೆ ಸೇರಿದಂತೆಎಲ್ಲಾ ಇಲಾಖೆಗಳು ತಮ್ಮಜವಬ್ದಾರಿ ಏನು? ತಾವೇನು ಮಾಡುತ್ತಿದ್ದೇವೆ ಎಂಬ ಮಾಹಿತಿಯನ್ನು ವೃಕ್ಷ ಪ್ರಾಧಿಕಾರಕ್ಕೆ ನೀಡಬೇಕು.ಅರಣ್ಯ ಇಲಾಖೆ ಈ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಮಾಸ್ಟರ್ ಪ್ಲಾಸ್ ತಯಾರಿಸಿ ಹಸಿರು ತುಮಕೂರು ಯೋಜನೆಗೆ ಚಾಲನೆ ನೀಡಬೇಕುಎಂದರು.
ಪಾರ್ಕ್‍ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವುದಾಗಿಯಾವುದೇ ಖಾಸಗಿ ಸಂಸ್ಥೆ, ಸಂಘಸಂಸ್ಥೆಗಳು ಮುಂದೆ ಬಂದಲ್ಲಿ ನಿಯಮಾನುಸಾರ ಅವಕಾಶ ಮಾಡಿಕೊಡಬೇಕು.ಟುಡಾದಿಂದಅಭಿವೃದ್ಧಿ ಪಡಿಸಿ ಪಾಲಿಕೆಗೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕ, ಸಂಘ ಸಂಸ್ಥೆಗಳ ನಿರ್ವಹಣೆಗೆ ಅವಕಾಶ ನೀಡಬೇಕುಎಂದು ತಿಳಿಸಿದರು.

      ನಗರದಲ್ಲಿ ಎಲ್ಲೆಲ್ಲಿ ಗಿಡಗಳನ್ನು ನೆಡಬೇಕು, ಎಲ್ಲಿ ನೆಡಬಾರದು ಎಂಬ ವೈಜ್ಞಾನಿಕ ವರದಿಯನ್ನು ಪಡೆದುಗಿಡ ನೆಡಬೇಕು. ಹೈ ಟೆನ್ಷನ್ ವಿದ್ಯುತ್ ಲೈನ್ ಕೆಳಗೆ ಆಯುರ್ವೇದಿಕ್ ಗಿಡಗಳನ್ನು ನೆಡಬೇಕು. ಗಿಡಗಳನ್ನು ಹಾಕಿದ ನಂತರ ತೆಗೆಯುವಂತಹ ಪರಿಸ್ಥಿತಿ ಬರದಂತೆ ಎಚ್ಚರಿಕೆ ವಹಿಸಬೇಕು. ವೃಕ್ಷ ಪ್ರಾಧಿಕಾರದ ನಿಯಮದಂತೆ ನಗರದಲ್ಲಿರುವ ಮರಗಳನ್ನು ಡಿಜಿಟಲ್ ಮೂಲಕ ಗಣತಿ ಮಾಡಬೇಕುಎಂದರು.

    ಸಾರ್ವಜನಿಕರು ತಮ್ಮ ಮನೆ ಮುಂದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದನ್ನು ಪ್ರೋತ್ಸಾಹಿಸಲು ಕಂದಾಯದಲ್ಲಿ 5 ವರ್ಷಗಳ ಕಾಲ ಪ್ರತಿ ವರ್ಷ 100 ರೂ. ಗಳಂತೆ ಡಿಬೇಟ್ ಕೊಡಬೇಕು. ಅಥವಾ ನೇರಖಾತೆಗೆಜಮೆ ಮಾಡಬೇಕು. ವಿದ್ಯಾರ್ಥಿಗಳು, ಯುವಜನತೆ ಮರಗಿಡಗಳನ್ನು ನೆಟ್ಟು ಪೋಷಿಸಿದರೆ ಅವರ ಬ್ಯಾಂಕ್‍ಖಾತೆಗೆ ನೇರವಾಗಿ ಹಣ ಪಾವತಿಯಾಗುವಂತೆ ನಿಯಮ ರೂಪಿಸಬೇಕು. ನಗರದಲ್ಲಿರುವ ಪ್ರತಿಯೊಂದು ಸ್ವತ್ತಿನ ಮಾಲೀಕರು ವೃಕ್ಷ ಪ್ರಾಧಿಕಾರದ ನಿಯಮದಂತೆಗಿಡ ಬೆಳೆಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅಕ್ಕತಂಗಿಕೆರೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿಯಡಿ ಕ್ರಮವಹಿಸಬೇಕು, ಅದನ್ನುಅರಣ್ಯವಾಗಿ ಹಾಗೂ ಉದ್ಯಾನವನವಾಗಿಯೂ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕು.ರಸ್ತೆ ನಿರ್ಮಾಣವಾಗಬೇಕು ಮಳೆ ಬಂದಾಗಕೆರೆಗೆ ನೀರು ಹರಿದುಜನರನ್ನು ಸೆಳೆಯುತ್ತದೆ. ಹೀಗಾಗಿ ಸ್ಥಳೀಯರೊಂದಿಗೆ ಸಮಾಲೋಚಿಸಿ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು.
ಡಿಎಫ್‍ಒ ರಾಮಲಿಂಗೇಗೌಡ ಮಾತನಾಡಿ, ಮುಂದಿನ ಒಂದು ವಾರದಲ್ಲಿ ವೃಕ್ಷ ಪ್ರಾಧಿಕಾರ ರಚಿಸಿ ನಿಯಮಾನುಸಾರ ಯಾವ ಪ್ರದೇಶದಲ್ಲಿ, ಯಾವಜಾತಿಯ ಗಿಡಗಳನ್ನು ಹಾಕಬೇಕು ಎಂಬ ಮಾಹಿತಿಯನ್ನು ನಕ್ಷೆಯಲ್ಲಿ ನಮೋದಿಸಲಾಗುವುದು. ಇನ್ನು ಮುಂದೆ ಯಾವುದೇ ಸಂಘಸಂಸ್ಥೆ, ವ್ಯಕ್ತಿ, ಇಲಾಖೆಗಳು ಮಾಸ್ಟರ್ ಪ್ಲಾನ್‍ನಲ್ಲಿ ಸೂಚಿಸಿದಂತೆ ಗಿಡ ಹಾಕುವುದು ಕಡ್ಡಾಯ. ಇದಕ್ಕೂ ಮುನ್ನ ನಕ್ಷೆಯಲ್ಲಿ ಅನುಮತಿ ಪಡೆಯಬೇಕು. ಮರಕಡಿಯುವಾಗಲೂ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುವುದು ಎಂದರು.

    ನಗರದಲ್ಲಿ ವಾಹನಗಳ ಸಂಖ್ಯೆಗಿಂತಲೂ ಮೂರು ಪಟ್ಟುಅಧಿಕ ಸಂಖ್ಯೆಯಲ್ಲಿ ಗಿಡಗಳನ್ನು ನೆಡಬೇಕು ಎನ್ನುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ. ಅದಕ್ಕೆ ಪೂರಕ ಸಹಕಾರವನ್ನು ಎಲ್ಲಾ ಇಲಾಖೆಗಳು ನೀಡಬೇಕು. ಮುಖ್ಯರಸ್ತೆಗೆ ಹಾಗೂ ಬಡಾವಣೆಗಳಲ್ಲಿ ರಸ್ತೆಗೆ ಬಾಗಿರುವ ಮರಗಳಿಗೆ ಆಧಾರ ಕಂಬ ನೀಡಿ ನೇರವಾಗಿ ಬೆಳೆಯುವಂತೆ ಮಾಡಲು ಕ್ರಮ ವಹಿಸಲಾಗಿದೆ.

    ಪಾಲಿಕೆಯಿಂದ ನಗರದ ಪಾರ್ಕ್‍ಗಳನ್ನು ಸ್ವಚ್ಛಗೊಳಿಸಿಕೊಟ್ಟಲ್ಲಿ ಗಿಡಗಳನ್ನು ನೆಡಲಾಗುವುದು. ಕನಿಷ್ಠ 50 ಪಾರ್ಕ್‍ಗಳಲ್ಲಿ ಗಿಡಗಳನ್ನು ನೆಡಲು ಇಲಾಖೆ ಸಿದ್ಧವಿದೆ. ಇದಕ್ಕೆ ನಾಗರೀಕರ ಸಹಕಾರವೂ ಬೇಕು, ಯಾವ ಪಾರ್ಕ್‍ನಲ್ಲಿಗಿಡ ನೀಡಬೇಕು ಎಂಬ ಮಾಹಿತಿ, ಸಲಹೆಯನ್ನು ಸಾರ್ವಜನಿಕರೂ ನೀಡಬೇಕು. ಈ ಗಿಡಗಳ ಶಾಶ್ವತ ನಿರ್ವಹಣೆಗೆ ಸಮಿತಿಯೊಂದು ರಚನೆಯಾಗಬೇಕು ಎಂದರು.
ಸ್ಮಾರ್ಟ್ ಸಿಟಿ ಅಧಿಕಾರಿ ಮಾತನಾಡಿ, ಅಮಾನಿಕೆರೆಯಲ್ಲಿ 8 ಲಕ್ಷರೂ.ವೆಚ್ಚದಲ್ಲಿ 1200 ಗಿಡಗಳನ್ನು ನೆಡಲಾಗಿದೆಎಂದು ಮಾಹಿತಿ ನೀಡಿದರು.

   ಪಾಲಿಕೆ ಕಾರ್ಯನಿರ್ವಹಕ ಇಂಜಿನಿಯರ್ ತಿಪ್ಪೆರುದ್ರಪ್ಪ ಮಾತನಾಡಿ, ನಗರದಲ್ಲಿರುವ ಎಲ್ಲಾ ಪಾರ್ಕ್‍ಗಳನ್ನು ಗುರುತಿಸಿ ಜಿ.ಐ.ಎಸ್ ಆಧಾರದಲ್ಲಿ ಲೇಯರ್ ಮಾಡಿ ಮರಗಿಡಗಳನ್ನು ಬೆಳೆಸುವುದಾಗಿ ಸಭೆಗೆ ಮಾಹಿತಿ ನೀಡಿದರು.
ತುಮಕೂರು ವಿವಿ ಅಧಿಕಾರಿಗಳು ಮಾತನಾಡಿ, ವಿವಿ ಆವರಣ, ವಿವಿಗೆ ಸಂಬಂಧಿಸಿದ ಹಾಸ್ಟೇಲ್ ಸೇರಿದಂತೆ ಮೂರು ಪಾರ್ಕ್‍ಗಳಿವೆ. ವಿವಿಯಲ್ಲಿ 6 ಎನ್ನೆಸ್ಸೆಸ್ಸ್ ಘಟಕಗಳಿಂದ 600 ವಿದ್ಯಾರ್ಥಿಗಳಿದ್ದಾರೆ. ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ 24 ಎನ್ನೆಸ್ಸೆಸ್ ಘಟಕಗಳ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳನ್ನು ಬಳಸಿಕೊಂಡು ಗಿಡಗಳನ್ನು ಹಾಕಿಸಲಾಗುವುದು ಎಂದರು.
ಡಿಡಿಪಿಐ ಕೆ. ಮಂಜುನಾಥ್ ಮಾತನಾಡಿ, ನಗರದ ಸರಕಾರಿ ಶಾಲಾ ಆವರಣಗಳಲ್ಲಿ ಗಿಡಗಳನ್ನು ನೆಡಲು ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಆದರೆ ಬಹುತೇಕ ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾಂಪೌಂಡ್ ಸೌಲಭ್ಯವಿಲ್ಲ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಸರಕಾರಿ ಶಾಲಾ ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಿಸಿಕೊಟ್ಟಲ್ಲಿ ಹಸಿರು ತುಮಕೂರು ಯೋಜನೆ ಯಡಿ ನೆಡುವ ಗಿಡಗಳು ಉಳಿದುಕೊಳ್ಳುತ್ತವೆ. ಇಲ್ಲವಾದಲ್ಲಿ ರಜಾ ದಿನಗಳಲ್ಲಿ ದನ ಕರುಗಳಿಗೆ ಆಹಾರವಾಗುತ್ತದೆ ಎಂದು ಮನವಿ ಮಾಡಿದರು.

    ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸರಕಾರಿ ಜ್ಯೂನಿಯರ್‍ಕಾಲೇಜು, ಎಂಪ್ರೆಸ್ ಸೇರಿದಂತೆ ನಗರಕೇಂದ್ರದ ಸರಕಾರಿ ಶೈಕ್ಷಣಿಕ ಸಂಸ್ಥೆಗಳಿಗೆ ಸ್ಮಾರ್ಟ್‍ಸಿಟಿಯಿಂದ ಕಾಂಪೌಂಡ್ ನಿರ್ಮಿಸಲು ಹೆಚ್ಚುವರಿ ಯೋಜನೆಯಲ್ಲಿ ಸೇರಿಸಿಕೊಳ್ಳುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರಅಧ್ಯಯನಕೇಂದ್ರದ ಸಿಇಒ ಕುಂದರನಹಳ್ಳಿ ರಮೇಶ್, ಕನ್ನಡಪರ ಸಂಘಟನೆಯ ಧನಿಯಾಕುಮಾರ್, ಪರಿಸರತಜ್ಞ, ಟಿವಿಎನ್ ಮೂರ್ತಿ, ಟೂಡಾ ಮಾಜಿ ಸದಸ್ಯ ಜಿ.ಕೆ.ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಬಸವರಾಜ್, ಶಂಭುಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here