ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಾಲ ಮನ್ನಾ ಧ್ವಂಧ್ವ ನೀತಿ : ರಾಜ್ಯದ ರೈತರ ಪಾಲಿಗೆ ಕಂಟಕ

0
24

   ಚಳ್ಳಕೆರೆ-

  ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ ಎಂಬ ಘೋಷಣೆ ಮಾಡಿದ್ದು, ಆದರೆ, ಯಾವ ಸಾಲ ಯಾವ ಬ್ಯಾಂಕ್‍ನಲ್ಲಿ ಯಾವ ಅವಧಿಯ ಸಾಲ ಮನ್ನಾ ಆಗುತ್ತದೆ ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ಸರ್ಕಾರದಿಂದ ಯಾವುದೇ ಆದೇಶವಿಲ್ಲವೆನ್ನುತ್ತಾರೆ. ಮುಖ್ಯಮಂತ್ರಿಯವರ ದ್ವಂದ್ವ ನಿಲುವು ರಾಜ್ಯದ ರೈತರಿಗೆ ಕಂಟಕ ಪ್ರಾಯವಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಆರೋಪಿಸಿದ್ಧಾರೆ.

    ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ಪಡೆಯುವ  ಉದ್ದೇಶದಿಂದ ಎಚ್.ಡಿ.ಕುಮಾರಸ್ವಾಮಿ ನಾನು ಮುಖ್ಯಮಂತ್ರಿಯಾದರೆ ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡುವೆ ಎಂದು ಸಾರ್ವಜನಿಕ ಸಭೆಯಲ್ಲಿ ಹಲವಾರು ಬಾರಿ ಭರವಸೆ ನೀಡಿದ್ದರು. ಮುಖ್ಯಮಂತ್ರಿಯಾದ ನಂತರ ಅವರು ನೀಡಿದ ಭರವಸೆಯನ್ನು ಮರೆತು ಮೈತ್ರಿ ಕೂಟದ ಸರ್ಕಾರ ನನ್ನದಾಗಿದ್ದು, ನನ್ನ ಪಕ್ಷವೇ ಬಹುಮತ ಪಡೆದು ಮುಖ್ಯಮಂತ್ರಿಯಾದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವೆ ಎಂದಿದ್ದೆ. ಆದರೆ, ಈಗ ಮಿತ್ರ ಪಕ್ಷ ಸಹಕಾರಬೇಕಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಇಲ್ಲ. ನಿಗದಿತ ಸಾಲವನ್ನು ಮಾತ್ರ ಕೆಲವು ವರ್ಷಗಳಿಗೆ ಸೀಮಿತಗೊಳಿಸಿ ಮನ್ನಾ ಮಾಡುವ ಘೋಷಣೆ ಮಾಡಿದ್ಧಾರೆ. ಆದರೆ, ಸಹಕಾರಿ ಬ್ಯಾಂಕ್‍ಗಳಾಗಲಿ, ರಾಷ್ಟ್ರಿಕೃತ ಬ್ಯಾಂಕ್‍ಗಳಲ್ಲಿ ಈ ಸರ್ಕಾರ ನೀಡಿಲ್ಲ. ರಾಜ್ಯದ ರೈತರ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವುದೇ ರೀತಿಯ ಸಹನುಭೂತಿ ಇಲ್ಲ. ಕಡೇ ಪಕ್ಷ ರೈತರ ಸಮಸ್ಯೆಗಳನ್ನು ಕೂಲಂಕುಷವಾಗಿ ಆಲಿಸುವಷ್ಟು ಸಮಯ ಅವರಿಗೆ ಇಲ್ಲವಾಗಿದೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬಿಟ್ಟು ಅವರು ನೀಡಿದ ಭರವಸೆಯಂತೆ ರೈತರ ಸಂಪೂರ್ಣ ಸಾಲವನ್ನು ಮುಖ್ಯಮಂತ್ರಿಗಳು ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದರು.

     ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಜಿ.ಭೀಮಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಬ್ಯಾಂಕ್‍ಗಳಲ್ಲಿ ರೈತರು ಕಡೇ ಪಕ್ಷ   ಸಾಲದ ಬಡ್ಡಿಯನ್ನು ಮರು ಪಾವತಿಸಿದಲ್ಲಿ ಅವರಿಗೆ ಪುನಃ ಸಾಲ ನೀಡಲಾಗುತ್ತಿತ್ತು. ಆದರೆ, ಈಗ ಮುಖ್ಯಮಂತ್ರಿಗಳ ಗೊಂದಲಗಳ ಹೇಳಿಕೆಯಿಂದ ರೈತರು ಬಡ್ಡಿ ನೀಡದೆ ಸಾಲಗಾರರಾಗಿ ಕಂಗಾಲಾಗಿದ್ಧಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಅದೇಶ ಹೊರಡಿಸುವತ್ತ ಮುಂದಾಗಬೇಕೆಂದರು.

LEAVE A REPLY

Please enter your comment!
Please enter your name here