ಮೂಕಪ್ರಾಣಿಗಳ ರಕ್ಷಣೆ ಎಲ್ಲರ ಕರ್ತವ್ಯ : ಸಚಿವ ಎಸ್.ಆರ್.ಶ್ರೀನಿವಾಸ್

0
21

ಚೇಳೂರು.
ಗ್ರಾಮೀಣ ಮಟ್ಟದಲ್ಲಿ ಸುಸಜ್ಜಿತವಾದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಕೇಂದ್ರ ಪ್ರಾರಂಭವಾಗಿರುವುದರಿಂದ ಮೂಕ ಪ್ರಾಣಿಗಳ ಆರೋಗ್ಯಕ್ಕೆ ಬಹಳ ಅನುಕೂಲವಾಗಿದೆ. ಈ ಸೌಕರ್ಯವನ್ನು ಸಾರ್ವಜನಿಕರು, ರೈತರು ಬಳಸಿಕೊಂಡು ಪಶುಗಳ ರಕ್ಷಣೆಯನ್ನು ಮಾಡಬಹುದಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.

   ಇವರು ಭಾನುವಾರ ಚೇಳೂರಿನ ಶ್ರೀಮರಳುಬಸವೇಶ್ವರ ದೇವಾಲಯದ ಬಳಿ 28.4 ಲಕ್ಷರೂ.ಗಳಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಸರ್ಕಾರಿ ಪಶು ಆಸ್ಪತ್ರೆಯ ಕಟ್ಟಡದ ಉದ್ಘಾಟಿಸಿ ಮಾತನಾಡಿದರು. ಮೂಕಪ್ರಾಣಿಗಳ ರಕ್ಷಣೆಗೆ ಗ್ರಾಮೀಣಮಟ್ಟದಲ್ಲಿ ಇಂತಹ ಸೌಲಭ್ಯ ಹೆಚ್ಚಿಗೆ ಸಿಗುವುದರಿಂದ ಸಾರ್ವಜನಿಕರು ಹಾಗೂ ರೈತರ ತಾವು ಸಾಕಿರುವ ರಾಸು, ಎಮ್ಮೆ, ಕುರಿ, ಮೇಕೆ, ಕೋಳಿ, ನಾಯಿ ಹಾಗೂ ಇತರ ಮೂಕ ಪ್ರಾಣಿಗಳಿಗೆ ಬಹಳ ಅನುಕೂಲವಾಗಲಿದೆ

   ಎಂದರು.ಅದಕ್ಕೆ ಸರಿಯಾಗಿ ಸಂಬಂಧ ಪಟ್ಟವರ ಸೇವೆಯು ಸಹ ಅತಿ ಮುಖ್ಯವಾಗಿದೆ. ಆಗ ಇಂತಹ ಸೇವೆಯನ್ನು ಒದಗಿಸಿದ ಸರ್ಕಾರದ ಯೋಜನೆಗಳು ಸದಾ ಯಶಸ್ವಿಯಾಗುತ್ತದೆ. ಇಲ್ಲಿ ಸಿಗುತ್ತಿರುವುದು ಮೂಕ ಪ್ರಾಣಿಗಳ ಆರೋಗ್ಯ ರಕ್ಷಣೆಯಾಗಿದೆ. ಅದರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಅದರಿಂದ ನಮ್ಮಗಳ ರಕ್ಷಾ ಕವಚದಂತೆ ರಕ್ಷಣೆ ಸಿಗುತ್ತದೆ. ಈ ಮೂಕ ಪ್ರಾಣಿಗಳ ಆರೋಗ್ಯ ರಕ್ಷಣೆ ಮಾಡಿಸುವುದು ಎಲ್ಲರ  ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ನಾಗರತ್ನಮ್ಮ, ಗ್ರಾಪಂ ಸದಸ್ಯರಾದ ಸಿ.ಎನ್.ಬಸವರಾಜು, ಸಿ.ಎನ್.ವೆಂಕಟೇಶ್, ಶಾರದಮ್ಮ, ಚಂದ್ರು, ಎಪಿಎಂಸಿ

   ನಿರ್ದೇಶಕ ಲೋಕೇಶ್ವರ್, ಮಾಜಿ ಗ್ರಾಪಂ ಅಧ್ಯಕ್ಷ ಸಿ.ಎನ್.ನಾಗರಾಜು, ಶ್ರೀಮರಳುಬಸವೇಶ್ವರ ದೇವಾಲಯದ ಅಧ್ಯಕ್ಷ ಚಿಕ್ಕಕೆಂಪಣ್ಣ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಡಾ.ಸೀತಾರಾಮಯ್ಯ, ಡಾ.ಎಂ.ಬಿ.ಪುಟ್ಟಸ್ವಾಮಿ, ಸುಷ್ಮ, ಪವಿತ್ರ ಹಾಗೂ ಇತರರು ಭಾಗವಹಿಸಿದ್ದರು

 

LEAVE A REPLY

Please enter your comment!
Please enter your name here