ಮೂಲಭೂತ ಸೌಲಭ್ಯದಿಂದ ವಂಚಿತ ಗ್ರಾಮ

0
31

  ಹಾವೇರಿ :  

ಸರಿಯಾದ ರಸ್ತೆಗಳು ಹಾಗೂ ಇತರ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ ಎಂದು ಇಲ್ಲಿನ ಶಿವಾಜಿ ನಗರದ 4 ನೇ ಕ್ರಾಸಿನ್ ಸಿಲ್ವರ್ ಪಾರ್ಕ ಹತ್ತಿರ ನಿವಾಸಿಗಳು ತಮ್ಮ ಅಳಲನ್ನು ತಾವು ಅನುಭವಿಸುವ ನೋವನ್ನು ತಿಳಿಸಿ ನಗರಸಭೆಯ ವಿರುದ್ಧ ಮಹಿಳೆಯವರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಮನೆಗಳಾಗಿ ಸುಮಾರು 15-20 ವರ್ಷಗಳು ಕಳೆದರೂ ವಾಸವಾಗಿರುವ ಜನರು ಓಡ್ಯಾಡಲು ಸರಿಯಾದ ರಸ್ತೆಗಳ ನಿರ್ಮಾಣ ಆಗದೇ, ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಇರುವ ಪರಸ್ಥಿತಿ ಉಂಟಾಗಿದೆ ಎಂದು ಜನಪ್ರತಿನಿಧಿಗಳಿಗೆ ಹಾಗೂ ನಗರಸಭೆಗೆ ಹಿಡಿಶಾಪ ಹಾಕಿದರು. ಸ್ಥಳೀಯ ನಿವಾಸಿ ಜಮೀಲಾ ಕಾಗಿನೆಲೆ ಮಾತನಾಡಿ ನಾವು ಇಲ್ಲಿ ನರಕಯಾತನೆ ಅನುಭವಿಸುವಂತಾಗಿದೆ. ವೃದ್ಧರು ಮಹಿಳೆಯರು ಸರ್ವಾಜನಿಕರು ಹರಸಾಹಸ ಪಟ್ಟು ಓಡ್ಯಾಡಬೇಕು.

ಯೋಗ್ಯವಾದ ರಸ್ತೆ ಇಲ್ಲಾ, ನೀರಿನ ಸಮಸ್ಯೆ ಕಾಡುತ್ತದೆ.ಗಟಾರು ಇಲ್ಲದೇ ಎಲ್ಲಂದರಲ್ಲಿ ಮಳೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡಬಹುದಾದ ವಾತವರಣವಿದೆ. ಅನಾರೋಗ್ಯವೆನಾದರೂ ಆದರೆ ಆಟೋ ವಾಹನಗಳು ಬರಲು ಹಿಂದೆಟು ಹಾಕುತ್ತಾರೆ.ಈ ಎಲ್ಲ ಸಮಸ್ಯೆಗಳನ್ನು ನೋಡಿ ಇಲ್ಲಿನ ನಿವಾಸಿಗರು ಚುನಾವಣೆಯನ್ನು ಬಹಿಷ್ಕಾರ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಸಿಗುತ್ತದೇಯೋ ಎಂದು ನೋವನ್ನು ತೊಡಿಕೊಂಡರು. ರಶೀದಾ ನದಾಫ್ ಮಾತನಾಡಿ ಮಳೆ ಬಂದರೆ ಶಾಲೆಗೆ ನಮ್ಮ ಮಕ್ಕಳು ಹೋಗುವುದು ಹಾಗೂ ಅನಾರೋಗ್ಯವಾದರೆ ರೋಗಿಗಳನ್ನು ಕರೆದುಕೊಂಡು ಹೋಗಲು ವಾಹನ ಬಾರದೇ ನಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ. ಈವರಿಗೆ ಇಲ್ಲಿ ಸದಸ್ಯರಾಗಿ ಹೋದವರು ಇಲ್ಲಿನ ಸಮಸ್ಯೆಗಳನ್ನು ಸರಿಯಾಗಿ ಆಲಿಸದೇ ಇರುವುದೇ ಈ ಯಾತನೆಗೆ ಕಾರಣ. ಇಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇದ್ದು, ಇದು ಯಾವುದೋ ಹಳ್ಳಿನಾ ? ಎಂಬ ಭಾವ ಮೂಡುವಂತಿದೆ.

ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡದೇ ಇರುವವರನ್ನು ಯಾಕೆ ನಗರಸಭೆಯ ಸದಸ್ಯರನ್ನಾಗಿ ಮಾಡಬೇಕು ? ಎಂಬ ಹತಾಶೆಯಿಂದ ಚುನಾವಣೆಯನ್ನು ಬಹಿಷ್ಕಾರ ಮಾಡಲು ಇಲ್ಲಿನ ನಿವಾಸಿಗರು ಮುಂದಾಗುವಂತೆ ಮಾಡಿದೆ ಎಂದು ಆಕ್ರೋಶಿತರಾದರು. ಈ ಸಂದರ್ಭದಲ್ಲಿ ನಿವಾಸಿಗಳಾದ ದಾವಲಸಾಬ ಕಣವಿ.ಅಬ್ದುಲ್.ಜಯರಾಮ ಮಾಳಾಪೂರ. ಸಾಬ ನದಾಫ್.ಪರ್ವಿನಬಾನು ಕಣವಿ.ಮುತ್ತಪ್ಪ ಎಂ ಆರ್ ಹಿಲಿಹಳ್ಳಿ.ಬಸಣ್ಣ ಕೋಣನವರ.ನೀಲಮ್ಮ ಗೌಡ್ರ ಸೇರಿದಂತೆ ಅನೇಕ ನಿವಾಸಿಗರು ಇದ್ದರು.

LEAVE A REPLY

Please enter your comment!
Please enter your name here