ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ :ಹೆಚ್.ಎಸ್. ಶಿವಶಂಕರ್

0
6

ಹರಿಹರ :

       ಬಿಜೆಪಿಯವರು ಪುಲ್ವಾಮಾ ದಾಳಿಯನ್ನು ಬಂಡವಾಳ ಮಾಡಿಕೊಂಡು ಮೋದಿಯವರ ಹೆಸರಿನಲ್ಲಿ ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನವನ್ನು ಬದಲಿಸಲು ಹೊರಟಿರುವ ಇಂತಹ ಪಕ್ಷಕ್ಕೆ ಬಡವರು ಹಾಗೂ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಪಕ್ಷ ನಮಗೆ ಬೇಕೇ..? ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.

      ನಗರದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಪರ ಶಾಸಕ ಎಸ್.ರಾಮಪ್ಪ ನವರ ಜೊತೆಯಲ್ಲಿ ರೋಡ್ ಶೋ ವೇಳೆ ಮಾತನಾಡಿದ ಅವರು ಹರಿಹರ ಕ್ಷೇತ್ರದ ಪ್ರಬಲ ಪ್ರತಿಸ್ಪರ್ಧಿಗಳೆಂದೇ ಕರೆ ಯಲ್ಪಡುವ ನಾನು ಮತ್ತು ಶಾಸಕ ಎಸ್.ರಾಮಪ್ಪ ನವರು ಎಣ್ಣೆ ಸೀಗೆಕಾಯಿ ಇದ್ದಂತೆ, ನಾನು ಅವರನ್ನು ಎಂದೂ ಮಾತನಾಡಿಸಿಲ್ಲ ಆದರೆ ಇಂದು ನಾನು ಅವರೊಂದಿಗೆ ಸಂತೋಷವಾಗಿ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿ ಇಬ್ಬರೂ ಮೈತ್ರಿ ಧರ್ಮ ಪಾಲಿಸುತ್ತಿದ್ದೇವೆ ಎಂದರು.

       ನಮ್ಮ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಮಾತು ಕೊಟ್ಟಿದ್ದೇನೆ ಅದೇ ರೀತಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ,ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯತೀತರಲ್ಲ ಒಂದಾಗಿ ಮೈತ್ರಿ ಮಾಡಿ ಕೊಂಡಿದ್ದು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮಿಬ್ಬರ ಮೇಲಿದೆ, ಚುನಾವಣೆಯನ್ನು ಜಾತಿ ಆಧಾರದಲ್ಲಿ ಮಾಡದೆ, ನೀತಿಯ ಆಧಾರದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಳೆದ 25 ವರ್ಷಗಳ ಹಿಂದಿನ ರಾಜಕೀಯ ಮರುಕಳಿಸಲಿದೆ ಚೆನ್ನಯ್ಯ ಒಡೆಯರ್ ಅವರಂತೆ ಮಂಜಪ್ಪನವರು ಸಹ ವಿಜಯ ಸಾಧಿಸಲಿದ್ದಾರೆ.ಈಗಿನ ಸಂಸದರು ಸಾವಿರಾರು ಕೋಟಿ ಅನುದಾನ ತಂದಿದ್ದೇನೆ ಎಂದು ಪ್ರತಿ ಭಾಷಣದಲ್ಲಿ ಹೇಳುತ್ತಿದ್ದಾರೆ ಏನೇನು ತಂದಿದ್ದಾರೆ,ಯಾವುದಕ್ಕೆ ಅನುದಾನ ತಂದಿದ್ದಾರೆ ಎನ್ನುವುದನ್ನು ಅವರು ಜನತೆಗೆ ತಿಳಿಸಬೇಕಾಗಿದೆ.

       ಭದ್ರಾ ಕೊನೆ ಭಾಗದ ರೈತರಿಗೆ ನೀರಿಲ್ಲ, ಅದರ ಬಗ್ಗೆ ಯಾರು ಪ್ರತಿಭಟನೆ ಮಾಡುತ್ತಿಲ್ಲ, ನೀರು ಕೊಡಿಸುವ ಜವಾಬ್ದಾರಿಯನ್ನು ಸಹ ಯಾರೂ ತೆಗೆದುಕೊಳ್ಳುತ್ತಿಲ್ಲ.ಇದರ ಬಗ್ಗೆ ಯಾರೂ ಸಹ ಚಿಂತನೆ ಮಾಡುತ್ತಿಲ್ಲ ಎಂದು ಹರೀಶ್ ಅವರನ್ನು ಗುರಿಯಾಗಿಸಿ ಮಾತನಾಡಿದರು.
ಕೆಲವರು ಕೆರೆ ತುಂಬಿಸುವ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುತ್ತಿದ್ದಾರೆ,ಆದರೆ ನಮ್ಮ ಕ್ಷೇತ್ರದಲ್ಲಿನ ಯಾವುದೇ ಕೆರೆಗಳಿಗೆ ನೀರು ತುಂಬಿಸಿಲ್ಲ.ಕೊಂಡಜ್ಜಿ ಕೆರೆ ಬತ್ತಿದೆ ನಮ್ಮ ಕಾಲದಲ್ಲಿ ತುಂಬಿದ್ದು ಈಗ ಬರಿದಾಗಿದೆ ಎಂದರು.

        ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ರಾಮಪ್ಪನವರು ಪ್ರತಿಸ್ಪರ್ಧಿಗಳಾಗಿದ್ದ ನಾವು ಗಳು ಇಂದು ಪ್ರಚಾರ ಮಾಡುತ್ತಿದ್ದೇವೆ .ಇದಕ್ಕೆ ಪ್ರತಿಫಲವಾಗಿ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.ಇಂದು ನಮ್ಮೊಂದಿಗೆ ಎಲ್ಲಾ ಸಮುದಾಯದ ಎಲ್ಲ ವರ್ಗದ ಜನರು ಬೆಂಬಲಕ್ಕೆ ನಿಂತಿದ್ದಾರೆ ಈ ಬೆಂಬಲ ವ್ಯರ್ಥವಾಗದೆ ನಮ್ಮ ಅಭ್ಯರ್ಥಿ ಜಯಶಾಲಿಯಾಗಿದ್ದಾರೆ ಎಂದು ಹೇಳಿದರು.

        ಈ ಸಮಯದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಚಿದಾನಂದಪ್ಪ, ಬಂಡೇರ ತಿಮ್ಮಣ್ಣ,ಜಿ.ನಂಜಪ್ಪ, ಹರೀಶ್,ಹಬೀಬುಲ್ಲಾ, ಪಿ.ಎನ್. ವಿರೂಪಾಕ್ಷ , ಅಡಕಿ ಪ್ರೇಮ್ ಕುಮಾರ್,ಮಂಜುನಾಥ,ಬಿ.ಆರ್.ಸುರೇಶ್ ,ಪೈಲ್ವಾನ್ ಸುರೇಶ್ ಚಂದಾಪುರ ,ಬಿ.ಅಲ್ತಾಫ್,ಅತಾ ವುಲ್ಲಾ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಳಾದ ಎಲ್.ಬಿ.ಹನುಮಂತಪ್ಪ ,ಎಂ.ಬಿ.ಅಬಿದಾಲಿ,ಬಿ.ರೇವಣಸಿದ್ದಪ್ಪ ,ಶಂಕರ್ ಖಟಾವ್ಕರ್,ರತ್ನಮ್ಮ, ಮೀರಾ, ಮಂಜುನಾಥ್ ಪಟೇಲ್,ಜಿಗಳಿ ಆನಂದಪ್ಪ,ಪರಶು ರಾಮ ಕಾಟ್ವೆ,ಎಂ.ಎಸ್.ವಸಂತ್,ಎಜಾಜ್ ಅಹ್ಮದ್, ಸಿ.ಎನ್.ಹುಲಿಗೇಶ್ ,ಎಂ.ಎನ್.ಶಿವಲಿಂಗಪ್ಪ,ಜಿ.ವಿ .ವೀರೇಶ್,ಬಿ.ಎನ್.ರಮೇಶ್,ಎಂ.ಎಸ್.ಆನಂದ್ ಕುಮಾರ್, ಸಂತೋಷ್ ದೊಡ್ಡಮನಿ, ನಿರಂಜನ ಮೂರ್ತಿ,ನಜೀರ್ ಅಹ್ಮದ್,ನಜೀರ್ ಅಹ್ಮದ್ ಹಲಗೇರಿ,ಷಣ್ಮುಖ (ಗುತ್ಯಪ್ಪ),ಹಬೀಬ್ ಬೇಗ್,ನೇತ್ರಾವತಿ,ವಿದ್ಯಾ ಅಲ್ಲದೇ ಇನ್ನೂ ಅನೇಕ ಕಾಂಗ್ರೆಸ್ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here