ಮೈತ್ರಿ ಸರ್ಕಾರದ ಶತ್ರುಗಳನ್ನು ಮಟ್ಟ ಹಾಕಲು ಮುಂದಾದ ಸಿ ಎಂ

0
46

ಬೆಂಗಳೂರು:

                ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಸಂಚಕಾರ ತಂದು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಆರ್ಥಿಕ ಸಂಪನ್ಮೂಲ ಒದಗಿಸಲು ಮುಂದಾಗಿರುವವರ ಬಗ್ಗೆ ಸುಳಿವು ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಇದೀಗ ನೇರ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದಾರೆ.

                ಕುಮಾರ ಸ್ವಾಮಿ ಅವರೇ ನೀಡಿರುವ ಸುಳಿವಿನಂತೆ ಬೆಂಗಳೂರಿನಲ್ಲಿ ಸಕಲೇಶಪುರದ ಗಣೇಶ್ ಎಂಬುವರು ರೆಸಾಟ್ರ್ಸ್ ನಿರ್ಮಿಸಿದ್ದರು. ಅವರಿಗೆ ಹಣ ಪೂರೈಸಿದ್ದು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಸೋಮ ಆಲಿಯಾಸ್ ನಾರ್ವೆ ಸೋಮಶೇಖರ್. ಈತನ ಮೇಲೆ ಮೀಟರ್ ಬಡ್ಡಿ ದಂಧೆ ಕುರಿತು ಹಲವು ದೂರುಗಳು ದಾಖಲಾಗಿವೆ. ಗಣೇಶ್ ಸಾವಿಗೆ ಈತನ ಕಿರಿಕುಳವೇ ಕಾರಣ ಎನ್ನಲಾಗಿದೆ.

                  ಬೆಂಗಳೂರಿನಲ್ಲಿ ಲಾಟರಿ, ಬೆಟ್ಟಿಂಗ್ ಮತ್ತು ಇಸ್ಪೀಟ್ ದಂಧೆಯಲ್ಲಿ ಕುಖ್ಯಾತಿ ಪಡೆದಿದ್ದಾರೆ ಎಂದು ಹೇಳಲಾಗುವ ಉದಯ್ ಗೌಡ, ಹೊಂಬಾಳೆ ವಿಜಿ ಮತ್ತು ಫೈಟರ್ ರವಿಗೂ – ಮೀಟರ್ ಬಡ್ಡಿ ದಂಧೆ ಮಾಡುವ ನಾರ್ವೆ ಸೋಮಶೇಖರ್‍ಗೂ ನೇರ ಸಂಪರ್ಕವಿದೆ ಎನ್ನಲಾಗಿದೆ.

                    ಸಕಲೇಶಪುರದ ಕಾಫಿ ಪ್ಲಾಂಟರ್ ಗಣೇಶ್ ಇತ್ತೀಚೆಗೆ ಶೂಟೌಟ್ ನಡೆಸಿ ತನ್ನ ಪತ್ನಿಯನ್ನು ಕೊಂದು, ಮಕ್ಕಳನ್ನೂ ಕೊಲ್ಲಲು ಯತ್ನಿಸಿದ ಘಟನೆ ನಡೆದಿತ್ತು. ಆ ಉದ್ಯಮಿ ಹೆಸರು ಗಣೇಶ್. ಸಕಲೇಶಪುರದ ಗಣೇಶ್ ಅವರು ರೆಸಾರ್ಟ್ ಪ್ರಾರಂಭಿಸಿದ್ದರು. ಸಾಲದ ಬಾಧೆಯಿಂದ ಅವರು ಇಡೀ ಕುಟುಂಬದೊಂದಿಗೆ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದರು. ಅವರ ಆ ಸ್ಥಿತಿಗೆ ಕಾರಣ ನಾರ್ವೆ ಸೋಮಶೇಖರ್ ಎಂಬ ಮಾಹಿತಿ ಇದೆ. ರೌಡಿ ಶೀಟರ್ ಆಗಿರುವ ನಾರ್ವೆ ಸೋಮಶೇಖರ್ ಅವರು ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರದಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಗಣೇಶ್‍ಗೆ ಬಡ್ಡಿ ನೀಡಿ ಸಾಲದ ಶೂಲಕ್ಕೆ ಸಿಲುಕಿಸಿದ ಆರೋಪ ಈತನ ಮೇಲಿದೆ.

                     ಹಾಗೆಯೇ, ಬೆಂಗಳೂರಿನಲ್ಲಿ ಲಾಟರಿ, ಬೆಟ್ಟಿಂಗ್ ಮತ್ತು ಇಸ್ಪೀಟ್ ದಂಧೆಯಲ್ಲಿ ಕುಖ್ಯಾತರಾಗಿರುವುದು ಉದಯ್ ಗೌಡ, ಹೊಂಬಾಳೆ ವಿಜಿ ಮತ್ತು ಫೈಟರ್ ರವಿ. ಇವರಿಗೂ ನಾರ್ವೆ ಸೋಮಶೇಖರ್‍ಗೂ ನೇರ ಸಂಪರ್ಕವಿದೆ ಎನ್ನಲಾಗಿದೆ. ನಾರ್ವೆ ಸೋಮಶೇಖರ್‍ಗೆ ಸಕಲೇಶಪುರದಲ್ಲಿ ಬಿಜೆಪಿ ಟಿಕೆಟ್ ಕೊಡಲು ಶಿಫಾರಸು ಮಾಡಿದ್ದು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಎನ್ನಲಾಗಿದೆ.

                   ಹೀಗಾಗಿ ಮುಖ್ಯಮಂತ್ರಿ ಹೇಳಿದ ಪ್ರಕಾರ, ನಾರ್ವೆ ಚಂದ್ರಶೇಖರ್ ಮೂಲಕ ಸಿ.ಪಿ. ಯೋಗೇಶ್ವರ್, ಬೆಂಗಳೂರಿನ ಪ್ರಮುಖ ನಾಯಕರಾದ ಆರ್. ಅಶೋಕ್ ಮತ್ತು ಅಶ್ವಥ್ ನಾರಾಯಣ್ ಈ ಸರಕಾರ ಉರುಳಿಸಲು ಸ್ಕೆಚ್ ಹಾಕಿರಬಹುದು ಎನ್ನುವ ಮಾಹಿತಿಯನ್ನು ಗುಪ್ತದಳ ಮುಖ್ಯಮಂತ್ರಿ ಅವರಿಗೆ ನೀಡಿದೆ.

                  ಸರಕಾರ ಉರುಳಿಸಲು ನಿಂತಿರುವ ಅಪರಾಧಿಗಳಿಗೆ ಬೆಂಗಾವಲಾಗಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಇರುವುದು ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಬೀಟರ್ ಬಡ್ಡಿ ದಂಧೆ, ಬಿಲ್ಡಿಂಗ್ ಮಾಫಿಯಾ ಮತ್ತು ಇಸ್ಪೀಟ್ ದಂಧೆಗೆ ಕಡಿವಾಣ ಹಾಕಿದ್ದೇ ಈ ಬೆಳವಣಿಗೆಗೆ ಕಾರಣ. ಇಂತಹವರ ಬೆಂಬಲಕ್ಕೆ ನಿಂತಿರುವವರನ್ನು ಮಟ್ಟ ಹಾಕಲು ಕುಮಾರ ಸ್ವಾಮಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here