ಮರಳು ದಂದೆಯನ್ನು ತಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿ

 -  - 


ಚಳ್ಳಕೆರೆ

ತಾಲ್ಲೂಕಿನ ತಳಕು ಹೊಬಳಿಯ ಮೈಲನಹಳ್ಳಿ ಗ್ರಾಮದ ಬಳಿ ಮರಳು ಬ್ಲಾಕ್‍ನ್ನು ನಿರ್ಮಿಸಿದ್ದು ಎರಡನೇ ಬ್ಲಾಕ್‍ನಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮರಳನ್ನು ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಂಡು ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವಂತೆ ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಎನ್.ಆದರ್ಶ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ಧಾರೆ.

ಈ ಬಗ್ಗೆ ಬುಧವಾರ ಜಿಲ್ಲಾಧಿಕಾರಿಗಳಿ ದೂರು ನೀಡಿರುವ ಇವರು, ಮೈಲನಹಳ್ಳಿ ಬ್ಲಾಕ್-2ರಲ್ಲಿ ಸರ್ಕಾರದ ನಿಯಮ ಅನುಸಾರ ಮರಳನ್ನು ತೆಗೆದು ಮಾರಾಟ ಮಾಡಬಹುದಾಗಿದೆ. ಗುತ್ತಿಗೆ ಪಡೆದವರು ಮಾತ್ರ ಈ ಸ್ಥಳದಲ್ಲಿ ಮರಳನ್ನು ತುಂಬಿಸಿಕೊಳ್ಳಲು ಸಾಧ್ಯ. ಆದರೆ, ಮೈಲನಹಳ್ಳಿ ಬ್ಲಾಕ್ ಎರಡರಲ್ಲಿ ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಲ್ಲಿ ಮನಬಂದಂತೆ ಮರಳನ್ನು ತುಂಬಿ ಸಾಗಾಟ ಮಾಡಲಾಗುತ್ತಿದೆ. ಕೇವಲ ಹೆವಿ ಲಾರಿಯಲ್ಲಿ 10 ಟನ್ ಮರಳು ಮಾತ್ರ ಸಾಗಾಟ ಮಾಡಬಹುದಾಗಿದ್ದು, ಇಲ್ಲಿನ ಹೆಚ್ಚಿನ ಪ್ರಮಾಣದ ಮರಳನ್ನು ಲಾರಿಯಲ್ಲಿ ತುಂಬಿ ಬೇರೆಡೆ ಸಾಗಿಸಲಾಗುತ್ತಿದೆ.

ಈ ಬಗ್ಗೆ ಸ್ಥಳೀಯ ರೈತರು ಯಾರಾದರೂ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. ಅದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಮೀರಿ ನಡೆಸುವ ಅವ್ಯವಹಾರಕ್ಕೆ ತಡೆಯಾಕಬೇಕು. ಸರ್ಕಾರಕ್ಕೆ ಬರುವ ಶುಲ್ಕವನ್ನು ಕಡ್ಡಾಯವಾಗಿ ವಸೂಲು ಮಾಡಬೇಕು. ರೈತರ ಮೇಲೆ ಗುತ್ತಿಗೆದಾರರು ಹಾಕುವ ಬೆದರಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರಲ್ಲಿ ಇಲ್ಲಿನ ನಿವಾಸಿಗಳೊಂದಿಗೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಸದರಿ ಸ್ಥಳದಲ್ಲಿ ಕಾನೂನು ರೀತಿ ಸಿಸಿ ಕ್ಯಾಮರಗಳು ಅಳವಡಿಸಬೇಕಿದೆ. ಮರಳು ಯಾರ್ಡ್‍ಗೆ ಹೊಂದಿಕೊಂಡಂತೆ ವೈಬ್ರೀಡ್ಜ್ ಇರಬೇಕಿದೆ. ಆದರೆ, ಇದ್ಯಾವೂ ಅಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದರಿಂದ ಅಕ್ರಮಗಳು ಸುಲಭವಾಗಿ ನಡೆಲು ಸಹಕಾರಿಯಾಗಿದೆ. ಅದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಅಕ್ರಮ ಮರಳಿಗೆ ಇತಿಶ್ರೀಯಾಡುವಂತೆ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಉಪ ನಿರ್ದೇಶಕರು ಗಣಿ ಮತ್ತು ಭೂವಿಜ್ಞಾನ ವಿಭಾಗಕ್ಕೂ ಸಹ ದೂರು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಜು, ಗುಂಡ, ರಾಜಣ್ಣ, ಕೆ.ಎಸ್.ಕಾರ್ತಿಕ, ಸಮರ್ಥ ಮುಂತಾದವರು ಇದ್ದರು.

comments icon 0 comments
0 notes
3 views
bookmark icon

Write a comment...

Your email address will not be published. Required fields are marked *