ಮೊಟ್ಟ ಮೊದಲ ಹಸಿರು ಹೆಲಿಕಾಪ್ಟರ್ ಪ್ರಥಮ ಹಾರಾಟ

0
7

ಬೆಂಗಳೂರು:

 ಭಾರತೀಯ ಕರಾವಳಿ ಪಡೆಗೆ ಗೊತ್ತುಪಡಿಸಿರುವ ಮೊಟ್ಟ ಮೊದಲ ಹಸಿರು ಹೆಲಿಕಾಪ್ಟರ್ ಬೆಂಗಳೂರಿನಲ್ಲಿ ಇಂದು ತನ್ನ ಪ್ರಪ್ರಥಮ ಹಾರಾಟ ನಡೆಸಿದೆ.

      ಆ ಬಳಿಕ ಅದನ್ನು ಎಚ್.ಎ.ಎಲ್‍ನ ವಿನ್ಯಾಸ ಮಳಿಗೆಯಾದ ರೋಟರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಶಾಖೆಗೆ ಹಸ್ತಾಂತರಿಸಲಾಯಿತು.

      ಭಾರತೀಯ ಕರಾವಳಿ ಪಡೆಯ ಮಹಾ ನಿರ್ದೇಶಕ ರಾಜೇಂದ್ರ ಸಿಂಗ್ ಅವರು ಎಚ್.ಎ.ಎಲ್ ಅಧ್ಯಕ್ಷ ಮತ್ತು ನಿರ್ವಹಣಾ ನಿರ್ದೇಶಕ ಟಿ. ಸುವರ್ಣರಾಜು ಅವರಿಂದ ಗುತ್ತಿಗೆ ದಾಖಲಾತಿಗಳನ್ನು ಸ್ವೀಕರಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸುವರ್ಣರಾಜು, 5 ವರ್ಷಗಳ ಕಾಲ ಹೆಲಿಕಾಪ್ಟರ್ಗಳನ್ನು ಪೂರೈಸಿದ ಬಳಿಕ ಎಚ್.ಎ.ಎಲ್, ಭಾರತೀಯ ಕರಾವಳಿ ಪಡೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಎಚ್.ಎ.ಎಲ್‍ನ ಎಎಲ್‍ಎಚ್ ಧೃವ್ ಹೆಲಿಕಾಪ್ಟರ್‍ಗಳನ್ನು ಕರಾವಳಿ ಪಡೆ ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

      ಭಾರತೀಯ ಕರಾವಳಿ ಪಡೆಗೆ 5 ವರ್ಷಗಳಲ್ಲಿ, 16 ಎಎಲ್‍ಎಚ್‍ಗಳನ್ನು ಪೂರೈಸುವ ಸುಮಾರು 5 ಸಾವಿರದ 126 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಎಚ್‍ಎಎಲ್ ಕಳೆದ ವರ್ಷದ ಮಾರ್ಚ್‍ನಲ್ಲಿ ಸಹಿ ಮಾಡಿದ್ದು, 2020ರ ನಂತರ ಪ್ರಮಾಣಿಕೃತ ಹೆಲಿಕಾಪ್ಟರ್‍ಗಳ ಪೂರೈಕೆ ಆರಂಭವಾಗಲಿದೆ.

LEAVE A REPLY

Please enter your comment!
Please enter your name here