ಮೊದಲ ಟೆಸ್ಟ್ : ಫೀಲ್ಡಿಂಗ್ ಗಿಳಿದ ಭಾರತ, ಬ್ಯಾಟಿಂಗ್ ಗೆ ಇಂಗ್ಲೆಂಡ್

0
39

ಬರ್ಮಿಂಗ್ ಹ್ಯಾಮ್:

      ಸಾಕಷ್ಟು ಕುತೂಹಲ ಮೂಡಿಸಿರುವ ಮತ್ತು ಅಷ್ಟೇ ವಿಶೇಷತೆಗಳನ್ನು ಒಳಗೊಂಡಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು (ಆಗಸ್ಟ್ 1) ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಈಗಾಗಲೇ ಮುಗಿದಿದ್ದು, ಟಾಸ್ ಸೋತಿರುವ ಭಾರತ ಫೀಲ್ಡಿಂಗ್ ಗೆ ಇಳಿದಿದೆ.

       ಕೊನೆಯ ಬಾರಿಗೆ 2014ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು (ಒಂದು ಪಂದ್ಯ ಡ್ರಾದೊಂದಿಗೆ) 3-1ರಿಂದ ಸೋತಿತ್ತು. ಈ ಬಾರಿ ಇಂಗ್ಲೆಂಡ್ ನ 1000ನೇ ಪಂದ್ಯದಲ್ಲಿ ಭಾರತ ಕಣಕ್ಕಿದಿರುವುದು ಮತ್ತೊಂದು ವಿಶೇಷ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ವಿರಾಟ್ ಕೊಹ್ಲಿಯ ಕಾಲೆಳೆದಿರುವುದರಿಂದ ಇಂದಿನ ಪಂದ್ಯದ ಮೇಲಿನ ಕುತೂಹಲ ಹೆಚ್ಚಿದೆ.

       1877ರಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ್ದ ಇಂಗ್ಲೆಂಡ್, ಜಗತ್ತಿಗೆ ಕ್ರಿಕೆಟ್‌ನ ಸೊಬಗನ್ನು ಪರಿಚಯಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ತಂಡವು ಹಲವು ಸಾಧನೆಗಳನ್ನು ಮಾಡಿದೆ. ತನ್ನದೇ ತವರಿನಲ್ಲಿ ನಡೆಯಲಿರುವ 1000ನೇ ಪಂದ್ಯದಲ್ಲಿ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಲು ರೂಟ್ ಪಡೆ ತವಕಿಸುತ್ತಿದೆ.

ಸಂಭಾವ್ಯ ತಂಡಗಳು

ಭಾರತ :
      ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ (ಉಪನಾಯಕ), ಕರುಣ್ ನಾಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿ.ಕೆ), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಾಸ್ಪ್ರಿತ್ ಬುಮ್ರಾ, ಶಾರ್ದುಲ್ ಠಾಕೂರ್.

 ಇಂಗ್ಲೆಂಡ್ :
      ಅಲಾಸ್ಟೇರ್ ಕುಕ್, ಕೀಟನ್ ಜೆನ್ನಿಂಗ್ಸ್, ಜೋ ರೂಟ್ (ನಾಯಕ), ದಾಯಿದ್ ಮಲಾನ್, ಜಾನಿ ಬೈರ್ಸ್ಟೊ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕ್ಯುರ್ರಾನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

 

LEAVE A REPLY

Please enter your comment!
Please enter your name here