ಮೋದಿ ಭೇಟಿಗೆಂದು ದೆಹಲಿಗೆ ಹಾರಿದ ರಾಜ್ಯ ರೈತರು

0
28

ಬೆಂಗಳೂರು:

ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 4ವರ್ಷಗಳ ಬಳಿಕ ಮೋದಿ ಜೀ ಕಳಸಾ-ಬಂಡೂರಿ ವಿವಾದದ ಬಗ್ಗೆ ರಾಜ್ಯ ರೈತರಿಗಳ ಜೊತೆಗೆ ಮಾತುಕತೆಗೆ ಒಪ್ಪಿಗೆ ನೀಡಿದ್ದಾರೆ.

 ಈಗಾಗಲೇ  ರಾಜ್ಯ ರೈತರು ಮೋದಿ ಭೇಟಿಗೆಂದು ದೆಹಲಿಗೆ ಹಾರಿದ್ದಾರೆ. ಜೂನ್ 14 ಅಥವಾ ಜೂನ್ 15ರಂದು ರಾಜ್ಯದ ರೈತರಿಗೆ ಪ್ರಧಾನಿ ಮೋದಿ ಅವರೊಂದಿಗೆ ಭೇಟಿಗೆ ಅವಕಾಶ ದೊರಕಲಿದೆ. ಹುಬ್ಬಳ್ಳಿ-ಧಾರವಾಡ, ನರಗುಂದ, ರಾಮದುರ್ಗ ಸೇರಿ ಕಳಸಾ-ಬಂಡೂರಿ ಭಾಗದ 23 ರೈತರು ದೆಹಲಿಗೆ ವಿಮಾನ ಹತ್ತಿದ್ದಾರೆ. ಸಾಲ ಮನ್ನಾ ಮಾಡದಿದ್ದರೆ ರೈತ ಸಂಘದಿಂದ ಉಗ್ರ ಹೋರಾಟ’ ರೈತರ ನಿಯೋಗದ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ವಹಿಸಿದ್ದು, ಕಳಸಾ-ಬಂಡೂರಿ ವಿವಾದ ಕುರಿತು ಪ್ರಧಾನಿಗಳ ಮೇಲೆ ಒತ್ತಡ ಹೇರಲು ನಿಯೋಗವು ತಯಾರಾಗಿದೆ.
 ಕಳಸಾ-ಬಂಡೋರಿಯ ಮಹತ್ವ, ಗೋವಾ ತಗಾದೆ, ಭಾಗದ ರೈತರ ಕಷ್ಟಗಳು, ನೀರಿನ ಲಭ್ಯತೆ, ಅವಶ್ಯಕತೆ, ನ್ಯಾಯಾಲಯದ ಈ ವರೆಗಿನ ಪ್ರಕ್ರಿಯೆ, ಕೇಂದ್ರದ ಮಧ್ಯಸ್ಥಿಕೆಯ ಮಹತ್ವ ಇನ್ನೂ ಹತ್ತು ವಿಷಯಗಳ ಬಗ್ಗೆ ರೈತರ ನಿಯೋಗ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದೆ.

LEAVE A REPLY

Please enter your comment!
Please enter your name here