ಯುವಕನ ಮೇಲೆ ಚಿರತೆ ದಾಳಿ

0
20

ತಾಲ್ಲೂಕಿನ ಕಂದಿಕೆರೆ ಹೋಬಳಿ ಮದನಮಡುವಿನಲ್ಲಿ :

    ಮಂಜುನಾಥ(20) ಎಂಬುವವರಿಗೆ ಚಿರತೆ ದಾಳಿ ನಡೆಸಿದೆ.
ಮಂಜುನಾಥ ಮದನಮಡುವಿನಲ್ಲಿ ತನ್ನ ತೋಟಕ್ಕೆ ಕುರಿಗಳನ್ನು ಹೊಡೆದುಕೊಂಡು ಹೋಗಿ ಮೇಯಿಸುತ್ತಿದ್ದಾಗ ದಾಳಿ ಮಾಡಿದ ಚಿರತೆ ಕುರಿಗಳನ್ನು ಹಿಡಿಯಲು ಬಂದಿದೆ ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಮಂಜುನಾಥನ ಮೇಲೆಯೂ ಚಿರತೆ ಎಗರಿದೆ, ಚಿರತೆ ತನ್ನ ಮೇಲೆ ದಾಳಿ ಮಾಡಿದೆ ಎಂದು ತಿಳಿದ ತಕ್ಷಣ ಚಿರತೆಯಿಂದ ಮಂಜುನಾಥ್ ತಪ್ಪಿಸಿಕೊಂಡಿದ್ದಾನಾದರೂ, ಮಂಜುನಾಥನ ತಲೆ, ಮೂಗು, ಹಣೆಗೆ ಗಾಯವಾಗಿದೆ, ನಂತರ ಚಿಕಿತ್ಸೆಗಾಗಿ ಮಂಜುನಾಥ್ ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ದಾಖಲಿಸಿ ಚಿಕಿತ್ಸೆ ಪಡೆದರು.

    ಚಿರತೆ ಕುರಿ ಮೇಲೆ ದಾಳಿ ಮಾಡಿದ್ದರಿಂದ ಕುರಿ ಸ್ಥಳದಲ್ಲೇ ಸತ್ತು ಹೋಗಿದೆ. ಆಸ್ಪತ್ರೆಗೆ ಅರಣ್ಯ ಇಲಾಖಾ ಅಧಿಕಾರಿಗಳು ಬೇಟಿ ನೀಡಿದ್ದರು. ಗಾಯಗೊಂಡ ಮಂಜುನಾಥನಿಗೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಹಾಗೂ ಪರಿಹಾರವನ್ನು ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here