ಯೋಗ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ

0
47

ಶಿಗ್ಗಾವಿ :

            ಆರೋಗ್ಯ ಎಂದರೆ ಕೇವಲ ದೈಹಿಕವಾಗಿ ಯಾವುದೇ ಕಾಯಿಲೆ ಇಲ್ಲದಿರುವಿಕೆಯಲ್ಲ, ದೈಹಿಕವಾಗಿ, ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಚನ್ನಾಗಿರುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತದೆ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಬಗೆ ಹೇಗೆ ? ಎಂದು ಕೆಲ ಜನರಿಗೆ ಗೊತ್ತು ಆದರೆ ಸಾತ್ವಿಕ ಆಹಾರ, ಯೋಗ, ಪ್ರಾಣಾಯಾಮಗಳ ವಿಧಗಳಿಂದಲೂ ಆರೋಗ್ಯವಾಗಿರುವುದು ಹೇಗೆ ಎಂಬುದನ್ನು ಯಾವುದು ಹೇಳುತ್ತದೆಯೋ ಅದೇ ಯೋಗ ಎಂದು ಯೋಗ ತರಬೇತುದಾರ ಕುಬೇರಪ್ಪ ಬಂಡಿವಡ್ಡರ ಹೇಳಿದರು.
                ಪಟ್ಟಣದ ಎಪಿಎಮ್‍ಸಿಯ ಸಭಾ ಭವನದಲ್ಲಿ ನಡೆದ ಜೆ ಸಿ ಸಪ್ತಾಹದ ಮೊದಲನೆ ದಿನದ ಅಂಗವಾಗಿ ಜೆಸಿ ಸಂಸ್ಥೆಯ ಘಟಕದಿಂದ ಯೋಗ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗವನ್ನು ಪರಿಚಯಿಸಿದ ಶ್ರೀ ಪಂತಂಜಲಿ ಋಷಿಗಳು ಇದ್ದ ಕಾಲಕ್ಕೆ ಬಹುಷ ಎಲ್ಲ ಜನರೂ ಸಾತ್ವಿಕ ಆಹಾರ ಪನೀಯಗಳನ್ನೇ ಸ್ವೀಕರಿಸುತ್ತಿದ್ದರು ಸದಾಚಾರ ಹೊಂದಿದವರಾಗಿದ್ದರು ಸನ್ಮಾರ್ಗದ ಮೂಲಕವೇ ಧನ ಸಂಪಾದನೆ ಮಾಡುತ್ತಿದ್ದರು ಬೆವರು ಸುರಿಸಿ ದುಡಿಯುತ್ತಿದ್ದರು, ಆದರೂ ಅನಾರೋಗ್ಯ ಉಂಟಾದರೆ ಆಯುರ್ವೇದ ಔಷದಿಯನ್ನು ಬಳಸುತ್ತಿದ್ದರು, ಅವರಿಗೆ ಯೋಗದ ಅವಶ್ಯಕತೆ ಇರಲಿಲ್ಲವಾದರೂ ಭವಿಚ್ಯವನ್ನು ಬಲ್ಲ ಪತಂಜಲಿ ಋಷಿಗಳು ಈಗಿನವರಿಗಾಗಿಯೇ ನಾಲ್ಕು ವಿಧದಿಂದ ಆರೋಗ್ಯ ನೀಡುವ ಯೋಗಶಾಸ್ತ್ರವನ್ನು ಅವಿಷ್ಕರಿಸಿ ಕೊಟ್ಟಿದ್ದಾರೆಂದು ಹೇಳಬಹುದು, ಹಾಗಾಗಿ ಈ ಯೋಗಕ್ಕೆ ಯಾವುದು ಅವಶದಯವಾಗಿದೆಯೋ ಅದುವೆ ಯೋಗ ಎಂದು ಹೇಳಲಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
                ಜೆಸಿ ಘಟಕದ ಅದ್ಯಕ್ಷ ಡಾ. ಡಿ ಎ ಗೊಬ್ಬರಗುಂಪಿ ಮಾತನಾಡಿ ಪ್ರತಿಯೋಬ್ಬರೂ ಆರೋಗ್ಯವಂತರಾದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾದ್ಯವಿದೆ ಎಂದರು.
ಡಾ. ಜೆ ಸಿ ನಿಡಗುಂದಿ, ಡಾ ಎನ್ ಎ ಮುಲ್ಲಾ ಹಾಗೂ ಜೆಸಿಐ ವಲಂ ಉಪಾದ್ಯಕ್ಷ ಡಾ. ಕುಮಾರಗೌಡ ಪಾಟೀಲ ಅವರು 50 ಕ್ಕಿಂತಲೂ ಹೆಚ್ಚು ತಪಾಸಣೆ ಮಾಡಿದರು.
               ಜೆ ಸಿ ಪವನ ಕುಮಾರ ಕೌಜಲಗಿ, ಪ್ರವೀಣ ಪಾಟೀಲ, ರಾಘವೇಂದ್ರ ದೇಶಪಾಂಡೆ, ಅನಿತಾ ಗೊಬ್ಬರಗುಂಪಿ, ಡಾ. ಲತಾ ನಿಡಗುಂದಿ, ಹಾಜರಿದ್ದರು, ಜೆ ಸಿ ಕಾರ್ಯದರ್ಶಿ ಗುರುರಾಜ ಹುಚ್ಚಣ್ಣವರ ಸ್ವಾಗತಿಸಿದರು, ಪ್ರೋ. ಎಸ್ ವಿ ಬಳಿಗಾರ ವಂದಿಸಿದರು.

LEAVE A REPLY

Please enter your comment!
Please enter your name here