ರಕ್ತದೊತ್ತಡ ಕುಸಿತ : ಕರುಣಾನಿಧಿ ಖಾಸಗಿ ಆಸ್ಪತ್ರೆಗೆ ದಾಖಲು

0
93

 ಚೆನ್ನೈ:

      ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಎಂ.ಕೆ.ಅಧ್ಯಕ್ಷ ಎಂ.ಕರುಣಾನಿಧಿ ಅವರನ್ನು ರಕ್ತದೊತ್ತಡ ಕುಸಿತದ ಹಿನ್ನೆಲೆಯಿಂದಾಗಿ ಶುಕ್ರವಾರ ತಡರಾತ್ರಿ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

      94 ವರ್ಷದ ಕರಣಾನಿಧಿ ಅವರ ದೇಹದಲ್ಲಿ ರಕ್ತದ ಒತ್ತಡ ದಿಢೀರ್‌ ಇಳಿಕೆಯಾದ ಕಾರಣ, ಅವರ ನಿವಾಸದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ತಡರಾತ್ರಿ 1:30ರ ಸುಮಾರಿಗೆ ದಾಖಲಿಸಲಾಗಿದೆ. ಮೂತ್ರನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಕರುಣಾನಿಧಿ ಅವರಿಗೆ ಗೋಪಾಲಪುರಂನಲ್ಲಿರುವ ಅವರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.

       ಈ ಕುರಿತು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟಾಲಿನ್, ‘ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು  ತಿಳಿಸಿದ್ದಾರೆ.

 

 

 

LEAVE A REPLY

Please enter your comment!
Please enter your name here