ರನ್ನ,ಪೊನ್ನರ ಕೊಡುಗೆ ಜಾತಿಗೆ ಸೀಮಿತವಾಗಿರಲಿಲ್ಲ : ಬಿಎಸ್‍ವೈ

0
42

ಮೈಸೂರು:

     ರನ್ನ ಮತ್ತು ಪೊನ್ನರ ಕೊಡುಗೆ ಜಾತಿಗೆ ಸೀಮಿತವಾಗಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

      ಮೈಸೂರಿನ ಸುತ್ತೂರು ಮಠದಲ್ಲಿ ಇಂದು ಆಯೋಜಿಸಿದ್ದ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಿದವರ ದಾಳಕ್ಕೆ ನಾವು ಬಲಿಯಾಗ ಬೇಕಾಗಿತ್ತು.ಆದರೆ, ಬಸವಣ್ಣನವರ ವಿಚಾರಧಾರೆಗಳು ಗಟ್ಟಿಯಾಗಿದ್ದರಿಂದ ಅದು ಹಾಗೆಯೇ ತಣ್ಣಗಾಯಿತು.ಧರ್ಮದಲ್ಲಿ ನಂಬಿಕೆ ಇಟ್ಟವರು, ಕುತಂತ್ರಕ್ಕೆ ಬಲಿಯಾಗದಂತೆ ಸಲಹೆ ನೀಡಿದ ಬಿಎಸ್‍ವೈ ಅವರು, ಜಾತಿ ಒಡೆಯುವ ಕೆಲಸ ಸರಿಯಲ್ಲ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನದ ವೇಳೆ ಈ ಪ್ರತ್ಯೇಕ ಕೂಗು ಬಂತು ಚುನಾವಣೆ ನಂತರ ಅದು ಈಗ ತಣ್ಣಗಾಗಿದೆ. ಶ್ರೇಷ್ಠ ಧರ್ಮ, ದಾರ್ಶನಿಕರು ಜನಿಸಿದ ನಾಡಲ್ಲಿ ನಾವಿದ್ದೇವೆ. ವೀರಶೈವ-ಲಿಂಗಾಯತ ಎಂಬ ಧರ್ಮವನ್ನು ಇಬ್ಬಾಗ ಮಾಡಲು ಹೊರಟ್ಟಿದ್ದರಿಂದ ಸಿದ್ದಗಂಗಾಶ್ರೀಗಳು ಮತ್ತು ಸುತ್ತೂರುಮಠದ ಶ್ರೀಗಳಿಂದಾಗಿ ಪ್ರತ್ಯೇಕ ಧರ್ಮದ ಕೂಗಿಗೆ ಹಿನ್ನೆಡೆಯಾಗಿದೆ. ಉತ್ತರ ಕರ್ನಾಟಕದ ಜೈನ ಸಾಹಿತ್ಯವು ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದೆ.ಇಲ್ಲಿ ಆರೂವರೆ ಕೋಟಿ ಜನ ಒಂದೇ ಎಂದು ತಿಳಿಯಬೇಕು, ಇವೆಲ್ಲವನ್ನು ಗೊತ್ತಿಲ್ಲದವರು, ರಾಜಕೀಯ ಮಾಡುತ್ತಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here