ರಾಜಸ್ಥಾನದ ವಿರುದ್ಧ ಕೆಕೆಆರ್‍ಗೆ 6 ವಿಕೆಟ್‍ಗಳ ಗೆಲುವು

0
33

ಕೊಲ್ಕತ್ತಾ:

ಐಪಿಎಲ್ ಕ್ರಿಕೆಟ್‍ನ 49ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್‍ಗಳ ಗೆಲುವು ಸಾಧಿಸಿದೆ. ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕೆಕೆಆರ್ ತಂಡವು ರಾಜಸ್ಥಾನ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಉತ್ತಮವಾಗಿಯೇ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ತಂಡವು 19 ಓವರ್‍ಗಳಲ್ಲಿ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 142 ರನ್‍ಗಳನ್ನು ಗಳಿಸಿತು. ಬಟ್ಲರ್ 22 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿ ಸಹಿತ 39 ರನ್, ರಾಹುಲ್ ತ್ರಿಪತಿ 15 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ಸಹಿತ 27 ರನ್, ಉನಕ್‍ದತ್ 18 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ಸಹಿತ 26 ರನ್, ಸಂಜು 10 ಎಸೆತಗಳಲ್ಲಿ 2 ಬೌಂಡರಿ ಸಹಿತ 12ರನ್, ಬೆನ್ 11 ರನ್‍ಗಳನ್ನು ಗಳಿಸಿದರೆ, ಉಳಿದವರು ಎರಡಂಕಿಯನ್ನು ದಾಟಲು ವಿಫಲರಾದರು.

ಕೆಕೆಆರ್ ಪರ ಕುಲದೀಪ್ ಯಾದವ್ 4, ಆಂಡ್ರ್ಯೂ ರಸೆಲ್ 2, ಕೃಷ್ಣ 2, ನರೈನ್ 1, ಶಿವಂ 1 ವಿಕೆಟ್ ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಉತ್ತಮವಾಗಿಯೇ ಆಟ ಆರಂಭಿಸಿ 18 ಓವರ್‍ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 145 ರನ್‍ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು. ಕ್ರಿಸ್ ಲಿನ್ 42 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 5 ಬೌಂಡರಿಯೊಂದಿಗೆ 45, ದಿನೇಶ್ ಕಾರ್ತಿಕ್ 31 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 5 ಬೌಂಡರಿಯೊಂದಿಗೆ ಅಜೇಯ 41, ಸುನಿಲ್ ನರೈನ್ 7 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿಯೊಂದಿಗೆ 21 ರನ್, ರಾಣಾ 17 ಎಸೆತಗಳಲ್ಲಿ 1 ಸಿಕ್ಸರ್, 2 ಬೌಂಡರಿಯೊಂದಿಗೆ 21 ರನ್, ರಸೆಲ್ 5 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 10 ರನ್‍ಗಳನ್ನು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಾಜಸ್ಥಾನದ ಪರ ಬೆನ್ ಸ್ಟೋಕ್ಸ್ 3, ಸೋದಿ 1 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ:
ರಾಜಸ್ಥಾನ ರಾಯಲ್ಸ್ : 142/10 (19)
ಕೊಲ್ಕತ್ತಾ ನೈಟ್ ರೈಡರ್ಸ್: 145/4 (18)

LEAVE A REPLY

Please enter your comment!
Please enter your name here