ರಾಜಸ್ಥಾನ ರಾಯಲ್ಸ್ ಗೆ 15 ರನ್‍ಗಳ ಗೆಲುವು

0
20

ಜೈಪುರ:

ಐಪಿಎಲ್ ಕ್ರಿಕೆಟ್‍ನ 40 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 15 ರನ್‍ಗಳಿಂದ ಸೋಲಿಸಿತು. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ತಂಡದ ಬಟ್ಲರ್‍ರವರ ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್‍ಗಳನ್ನು ಕಳೆದುಕೊಂಡು 158 ರನ್‍ಗಳನ್ನು ಗಳಿಸಿತು. ಬಟ್ಲರ್ 82, ಸ್ಯಾಮ್ಸನ್ 22, ಬೆನ್ 14 ರನ್‍ಗಳನ್ನು ಗಳಿಸಿದರು.

ಪಂಜಾಬ್ ಪರ ಆಂಡ್ರ್ಯೂ 4, ರಹಮಾನ್ 2, ಮಾರ್ಕಸ್ 1 ವಿಕೆಟ್‍ಗಳನ್ನು ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡವು ಆರಂಭಿಕ ಆಟಗಾರ ರಾಹುಲ್ ಬಿಟ್ಟರೆ ಉಳಿದವರಾರು ಹೋರಾಟ ಮಾಡುವ ಮನೋಭಾವವನ್ನು ತೋರಲಿಲ್ಲ. ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್‍ಗಳನ್ನು ಕಳೆದುಕೊಂಡು 143 ರನ್ ಗಳಿಸಿ 15 ರನ್‍ಗಳಿಂದ ಸೋಲೊಪ್ಪಿಕೊಂಡಿತು.

ಕೆ.ಎಲ್ ರಾಹುಲ್ ಅಜೇಯ 95 ರನ್‍ಗಳಿಸಿದರೂ ಉಳಿದವರಾರು ಹೋರಾಡಲಿಲ್ಲ. ರಾಯಲ್ಸ್ ಪರ ಗೌತಮ್ 2, ಆರ್ಚರ್ 1, ಉನಕ್ದತ್ 1, ಬೆನ್ 1, ಸೋದಿ 1 ವಿಕೆಟ್‍ಗಳನ್ನು ಗಳಿಸಿದರು.

ಸಂಕ್ಷಿಪ್ತ ಸ್ಕೋರ್:

ರಾಜಸ್ಥಾನ ರಾಯಲ್ಸ್ : 158/8 (20)
ಪಂಜಾಬ್ : 147/7 (20)

LEAVE A REPLY

Please enter your comment!
Please enter your name here