ರಾಜ್ಯದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆಯಿಂದ ವರದಿ

0
107

ಬೆಂಗಳೂರು

ರಾಜ್ಯದಲ್ಲಿ ಮೇ 19 ಮತ್ತು 20 ರಂದು ಭಾರೀ ಮಳೆ ಆಗಲಿದೆ  ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ರಾಜ್ಯದ ಹಲವು ಕಡೆ ಈಗಾಗಲೇ ಪೂರ್ವ ಮುಂಗಾರಿನ  ಮಳೆಯಿಂದಾಗಿ ಉಷ್ಣಾಂಶದ ಪ್ರಮಾಣ  ಕಡಿಮೆಗೊಂಡಿದ್ದು,  ರಾಜ್ಯದ ರಾಜಧಾನಿ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೇ ದಕ್ಷಿಣ ಒಳನಾಡಿನಲ್ಲಿ,, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ, ಹಾಸನ ಪ್ರದೇಶಗಳಲ್ಲಿ ಮಳೆ ಆಗಲಿದೆ. ಚಂಡಮಾರುತ ತಮಿಳುನಾಡು ಪ್ರದೇಶದಲ್ಲಿ ನಿರ್ಮಾಣವಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿರುವ ಪ್ರಭಾವದಿಂದ ಪೂರ್ವ ಮುಂಗಾರಿನ  ಮಳೆ ಇನ್ನಷ್ಟು ಆಭ್ರಟಿಸಲಿದೆ ಎಂದು ತಿಳಿಸಿದ್ದಾರೆ.

 ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗುರುವಾರದ ವೇಳೆಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗುವ ಸಾಧ್ಯತೆ ಇದೆ. ಆದರೆ ಕರಾವಳಿ ಭಾಗಕ್ಕೆ ಯಾವುದೇ ಅಪಾಯವಿಲ್ಲ ಎಂದು ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here