ರಾಜ್ಯದ ಒಡಕು ಮೂಡಲು ಅಪ್ಪ-ಮಕ್ಕಳೇ ಕಾರಣ – ಬಿಎಸ್‍ವೈ ವಾಗ್ದಾಳಿ

0
32

 ಬೆಳಗಾವಿ:

      ರಾಜ್ಯ ವಿಭಜನೆಗೆ ಅಪ್ಪ-ಮಕ್ಕಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

      ಬೆಳಗಾವಿಯಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಅವರು, ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಮತ್ತು ಅಧಿಕಾರದ ದಾಹದಿಂದಾಗಿ ರಾಜ್ಯವನ್ನು ವಿಭಜಿಸುವ ಹುನ್ನಾರ ನಡೆಸುತ್ತಿದ್ದಾರೆ. ಅಪ್ಪ-ಮಕ್ಕಳ ಹೇಳಿಕೆಗಳು ಬಾಯಿ ತಪ್ಪಿ ಬಂದಿರುವುದಿಲ್ಲ. ಇದರ ಹಿಂದೆ ಪೂರ್ವ ನಿಯೋಜಿತ ಪಿತೂರಿ ಅಡಗಿದೆ.

Image result for yeddyurappa

      ಬೆಂಗಳೂರಿನ ಆದಾಯವನ್ನು ಉತ್ತರಕರ್ನಾಟಕದ ಅಭಿವೃದ್ದಿಗೆ ನೀಡುವುದಾಗಿ ಮುಖಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಎಸ್‍ವೈ ಅವರು, ಅಕ್ಕಿ, ಬೇಳೆ, ವಿದ್ಯುತ್‍ಶಕ್ತಿಯನ್ನು ಉತ್ತರಕರ್ನಾಟಕದಿಂದ ಪಡೆಯಲಾಗುತ್ತದೆ. ನನಗೆ ಮತ ಹಾಕಿಲ್ಲ. ನಿನಗೆ ಮತ ಹಾಕಿಲ್ಲ ಎಂಬ ಮಾತುಗಳನ್ನು ಆಡುವುದು ಅವರ ಬೇಜವಾಬ್ದಾರಿತನದಿಂದ ಕೂಡಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ, ನಾವು ಕೈ ಕಟ್ಟಿ ಕೂರುವುದಿಲ್ಲ.ಕೃಷ್ಣ ಮೇಲ್ದಂಡೆ ಹೆಚ್ಚಿಸುವ ಕೆಲಸ ಏಕೆ ಮಾಡಲಿಲ್ಲ. ಬೇರೆ ರಾಜ್ಯ ಬೇಕಾ ಅಂತ ಹೇಳಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸೊಕ್ಕಿನ ಮಾತಿನಿಂದ ಪ್ರಜಾತಂತ್ರಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಗುಡುಗಿದರು.

LEAVE A REPLY

Please enter your comment!
Please enter your name here