ರಾಜ್ಯಪಾಲರ ಅಪ್ರಜಾತಾಂತ್ರಿಕ ಖಂಡಿಸಿ ಎಸ್.ಯು.ಸಿ.ಐ(ಕಮ್ಯುನಿಸ್ಟ್)ಪಕ್ಷದಿಂದ ಪ್ರತಿಭಟನೆ

 -  -  1


ಬಳ್ಳಾರಿ:

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಅಕ್ರಮಗಳು ನಡೆದು, ಹಣ-ಹೆಂಡದ ಕೊಳಕು ರಾಜಕೀಯದಿಂದಾಗಿ ಚುನಾವಣೆ ನ್ಯಾಯಬದ್ದವಾಗಿ ನಡೆದಿಲ್ಲ ಎಂದು ಎಸ್‍ಯುಸಿಐ-ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಟೀಕೆ ಮಾಡಿದರು.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಪುರಸಭೆ ಬಸ್ ನಿಲ್ದಾಣದಲ್ಲಿ ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷವು ಕರ್ನಾಟಕ ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ಅಪ್ರಜಾತಾಂತ್ರಿಕ ನಡೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಕೇಂದ್ರ ಸರ್ಕಾರದ ಭೂತದಹನ ಮಾಡಲಾಯಿತು. ನಂತರ ಮಾತನಾಡಿದ ಅವರು ಚುನಾವಣೆ ನಿಜವಾಗಿಯೂ ಜನಪರವಾಗಿಲ್ಲ. ಮೂರೂ ಪಕ್ಷಗಳಿಂದ ಆಯ್ಕೆಯಾಗಿರುವ ಶಾಸಕರು ಯಾರೂ ಜನಪರವಾಗಿಲ್ಲ ಎಂಬುದು ಸಾಬೀತಾಗಿದೆ. ಆಯ್ಕೆಯಾಗಿರುವ ಒಟ್ಟು ಶಾಸಕರ ಪೈಕಿ ಶೇ.37 ರಷ್ಟು ಶಾಸಕರು ಗಂಬೀರ ಅಪರಾಧಗಳಲ್ಲಿ ಬಾಗಿಯಾದ ಬಗ್ಗೆ ಮತ್ತು ಅದರಲ್ಲಿ ಅತೀ ಹೆಚ್ಚು ಶಾಸಕರು ಬಿಜೆಪಿ ಪಕ್ಷದವರೆಂದು ಪತ್ರಿಕೆಗಳಲ್ಲಿ ವರದಿಯಾಗಿವೆ ಎಂದು ಹಳಿದರು.

ಮರು ಆಯ್ಕೆಯಾಗಿರುವ ಶಾಸಕರ ಶೇ.90ರಷ್ಟು ಆಸ್ತಿ ಜಾಸ್ತಿಯಾಗಿದೆ. ನಾವು ಯಾರ ಮೇಲೆ ನಂಬಿಕೆಯಿಟ್ಟು ಆಯ್ಕೆಮಾಡಿ ಕಳುಹಿಸಿದೆವೋ, ಚುನಾವಣೆಗೆ ಮುಂಚೆ ಯಾರು ಯಾರನ್ನ ಬೈಯ್ಯುತ್ತಿದ್ದರೋ ಅವರು ಇಂದು ಅಣ್ಣ-ತಮ್ಮಂದಿರಾಗಿದ್ದಾರೆ ಎಂದರು. ಆದರೆ ಕರ್ನಾಟಕದ ರಾಜ್ಯಪಾಲರು ತೆಗೆದುಕೊಂಡ ನಿರ್ಧಾರದದೇಶದಲ್ಲಿ ಚರ್ಚೆಯಾಗುತ್ತಿದೆ. ಬಹುಮತಕ್ಕೆ 112 ಶಾಸಕರ ಅವಶ್ಯಕತೆಯ ಬಗ್ಗೆ ಸ್ಪಷ್ಟವಾಗಿ ಗೊತ್ತಿದ್ದರೂ ಕೇವಲ 104 ಶಾಸಕರ ಬೆಂಬಲವಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವುದು ಪ್ರಜಾತಂತ್ರದ ಕಗ್ಗೊಲೆಯಾಗಿದೆ.

ರಾಜಭವನವನ್ನು ಬಿಜೆಪಿಯ ಪಕ್ಷದ ಕಛೇರಿಯನ್ನಾಗಿಸುವ ನೀಚ ರಾಜಕೀಯದ ಹುನ್ನಾರವಾಗಿದೆ.ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದಿರುವುದು ಬೀದಿ ಗುಂಡಾ ಹೇಳುವ ಹೇಳಿಕೆಯಂತಿದ್ದು ಪ್ರಧಾನಿ ಹುದ್ದೆಗೆ ಅಪಚಾರ ಮಾಡಿದ್ದಾರೆ. ನಾವು ಆಯ್ಕೆ ಮಾಡಿ ಕಳಿಸಿರುವ ಶಾಸಕರು ಮಾರಾಟಕ್ಕಿರುವ ಬಜಾರದ ವಸ್ತುಗಳಂತಾಗಿದ್ದಾರೆ.
ನೀಚ ಕೆಲಸವನ್ನು ಮೊದಲು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಆದರೆ ನಾವು ಬಿನ್ನ ಪಕ್ಷವೆಂದು ಅಧಿಕಾರ ಹಿಡಿದ ಬಿಜೆಪಿ ಇಂದು ಕಡು ಭ್ರಷ್ಟಾಚಾರ ಮತ್ತು ಶಾಸಕರ ಖರೀದಿಗೆ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಜನರ ನಂಬಿಕೆಗೆ ದ್ರೋಹ ಬಗೆದಿದೆ. ಅತ್ಯಂತ ನೀಚ, ಕೆಟ್ಟ ರಾಜಕೀಯವನ್ನು ಮಾಡುತ್ತಿದೆ. ಹಾಗಾಗಿ ಬಿಜೆಪಿ ಅತ್ಯಂತ ಜನ ವಿರೋಧಿ, ಪ್ರಜಾತಂತ್ರ ವಿರೋಧಿ ಪಕ್ಷವಾಗಿದೆ ಎಂದು ಹೇಳಿದರು. ಬಿಜೆಪಿಯ ಈ ನಡೆಯನ್ನು ದೇಶದ ಪ್ರಗತಿಪರರು, ಪ್ರಜ್ಞಾವಂತ ಜನರು ವಿರೋಧಿಸುತ್ತಿದ್ದಾರೆ ಎಮದು ಹೇಳಿದರು.

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಸೋಮಶೇಕರ ಗೌಡ, ತಾಲ್ಲೂಕು ಮುಖಂಡರಾದ ಚಂದ್ರಶೇಖರ ಮೇಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜನಸಂಗ್ರಾಮ ಪರಿಷತ್‍ನ ಮುಖಂಡ ಶ್ರೀಶೈಲ ಆಲದಹಳ್ಳಿ, ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಲಕ್ಷ್ಮಣ ಜಡಗಣ್ಣವರ್, ಗೋವಿಂದ, ಭುವನಾ, ದೀಪಾ, ಭಾರತಿ, ಸೌಮ್ಯ, ಶರಣು ಪಾಟೀಲ್ ಮುಂತಾದವರು ಉಪಸ್ಥಿತಿಇದ್ದರು.

comments icon 0 comments
0 notes
11 views
bookmark icon

Write a comment...

Your email address will not be published. Required fields are marked *