ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಹಗರಿಬೊಮ್ಮನಹಳ್ಳಿ:

      ಇದೇ ಸೆ.13ರಂದು ಪಟ್ಟಣದಲ್ಲಿ ಗಣೇಶ ಚತುರ್ಥಿ ಸಡಗರ ಸಂಭ್ರಮದಿಂದ ಕೂಡಿರುತ್ತೆ. ಅದರ ಅಂಗವಾಗಿ ವಿವಿಧ ಸಂಘಸಂಸ್ಥೆಗಳಿಂದ ಯುವಕರು ಕ್ರೀಡಾಚಟುವಟಿಕೆಗಳು, ಸಾಂಸ್ಕøತಿಕ, ಮನೋರಂಜನೆ ಹಾಗೂ ನಾಟಕೋತ್ಸವದಂತ ಚಟುವಟಿಕೆಗಳನ್ನು ನಡೆಸಿಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಜ್ಯೋತಿವೃಂದ ಸತತ 41ನೇ ವರ್ಷದ ಗಣೇಶೋತ್ಸವದ ಆಚರಣೆಯಲ್ಲಿ ತೊಡಗಿಕೊಂಡಿದೆ.

       ಜ್ಯೋತಿವೃಂದದ ಅಧ್ಯಕ್ಷ ಚಿನ್ಮಲಿ ಸೂರೇಶ್ ಮಾತನಾಡಿ ಪ್ರತಿವರ್ಷದಂತೆ ಜರುಗುವ ಗಣೇಶೋತ್ಸವವು ಈ ಬಾಋಇ 41ನೇ ವರ್ಷದ ಆಚರಣೆಯಲ್ಲಿರುವುದರಿಂದ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಸೆ.16 ಮತ್ತು 17ರಂದು ರಾಜ್ಯಮಟ್ಟದ ಆಹ್ವಾನಿತ ತಂಡಗಳ ಹೊನಲುಬೆಳಕು ವಾಲಿಲಿಬಾಲ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

        ಈ ಪಮದ್ಯಾವಳಿಯಲ್ಲಿ ರಾಜ್ಯದ ರೈಲ್ವೇಸ್ ತಂಡ ಸೇರಿ ಅನೇಕ ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ತಂಡಗಳು ಭಾಗವಹಿಸಲಿದ್ದು ಕ್ರೀಡಾಭಿಮಾಣಿಗಳಿಗೆ ರಸದೌತಣದ ಕ್ಷಣವಾಗಲಿದೆ ಎಂದು ತಿಳಿಸಿದ ಅವರು, ಪ್ರಥಮ ಬಹುಮಾನವಾಗಿ 21ಸಾವಿರ ರೂ.ಗಳು, ದ್ವಿತೀಯ ಬಹುಮಾನ 11ಸಾವಿರ ರೂ.ಗಳು ಹಾಗೂ ಆಕರ್ಷಕ ಕಪ್ಪುಗಳು ಮತ್ತು ಮೂರನೇ ಬಹುಮಾನವಾಗಿ ಆಕರ್ಷಕ ಕಪ್ಪುಗಳೊಂದಿಗೆ ಉತ್ತಮ ಹೊಡೆತ, ಉತ್ತಮ ಆಟಗಾರರಿಗೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದೆಂದು ತಿಳಿಸಿದರು. ವಿಶೇಷವಾಗಿ ಮಾಜಿ ಶಾಸಕ ನಾ.ರಾ.ಸೂರ್ಯನಾರಾಯಣ ರೆಡ್ಡಿ ಉದ್ಘಾಟಿಸಲಿದ್ದು, ಕ್ಷೇತ್ರದ ಶಾಸಕ ಭೀಮಾನಾಯ್ಕ್ ಸೇರಿದಂತೆ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ.

      ಭಾಗವಹಿಸಲಿಚ್ಚಿಸುವ ತಂಡಗಳು 9916255073 ಸಂದೀಪ್ ಹಾಗೂ 9986086786 ಅಬ್ಬುರವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap