ರಾಜ್ಯಸಭಾ ಉಪಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್

0
56

ನವದೆಹಲಿ: 

      ರಾಜ್ಯಸಭೆ ಉಪ ಸಭಾಪತಿಯಾಗಿ ಎನ್‌ಡಿಎ ಅಭ್ಯರ್ಥಿ, ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್‌ ಅವರು ಗುರುವಾರ ಆಯ್ಕೆಯಾದರು. 

      245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಟ್ಟು 230 ಮತಗಳು ಚಲಾವಣೆಯಾದವು. ಈ ಮತಗಳ ಪೈಕಿ ಹರಿವಂಶ ನಾರಾಯಣ ಅವರು 125 ಮತ ಪಡೆದು ಗೆಲುವು ಸಾಧಿಸಿದರು. ವಿರುದ್ಧವಾಗಿ(ಬಿ.ಕೆ.ಹರಿಪ್ರಸಾಸ್‌ ಪರ) 105 ಮತ ಬಿದ್ದವು. ಇಬ್ಬರು ಸದಸ್ಯರು ಗೈರಾಗಿದ್ದರು.

      ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಯ್ಕೆಯನ್ನು ಪ್ರಕಟಿಸಿದರು.

LEAVE A REPLY

Please enter your comment!
Please enter your name here