ರಾಜ್ಯ ಇಬ್ಭಾಗದಿಂದ ಪ್ರಯೋಜನವಿಲ್ಲ – ಪಾಟೀಲ್‍ಪುಟ್ಟಪ್ಪ

0
14

 ಹುಬ್ಬಳ್ಳಿ:

Image result for patil puttappa

      ಪ್ರತ್ಯೇಕ ರಾಜ್ಯ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಾಡೋಜ ಪಾಟೀಲ್‍ಪುಟ್ಟಪ್ಪ ಅಭಿಪ್ರಾಯಪಟ್ಟರು.

      ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸತ್ಯ. ಅದಕ್ಕೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಒಂದು ವೇಳೆ ಪ್ರತ್ಯೇಕ ರಾಜ್ಯವಾದಲ್ಲಿ ಆಂದ್ರಪ್ರದೇಶದಲ್ಲಾದ ಘಟನೆಯಂತಾಗುತ್ತದೆ. ಅಂದರೆ, ಆಂದ್ರ-ತೆಲಂಗಾಣವಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ.

      ಉತ್ತರಕನಾಟಕದ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಅವರೇಕೆ ಅಭಿವೃದ್ದಿ ಬಗ್ಗೆ ಬಾಯಿ ಬಿಡುತ್ತಿಲ್ಲ. ಇದಕ್ಕೆ ಇಚ್ಚಾಶಕ್ತಿ ಕೊರತೆಯೇ? ಆಗಸ್ಟ್ 2 ರಂದು ನಡೆಸುವ ಬಂದ್‍ನಿಂದಾಗುವ ಪ್ರಯೋಜನವೇನು? ಎಂದು ಪ್ರಶ್ನಿಸಿ, ಧಾರವಾಡದಲ್ಲಿಯೇ ಮುಖ್ಯಮಂತ್ರಿಗಳನ್ನು ಕರೆಸಿ ಸಭೆ ನಡೆಸುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here