ಸಿದ್ದು ಮತ್ತೆ ಸಿಎಂ ಆಗ್ಬೇಕು..!

0
41

ಬೆಂಗಳೂರು:

      ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ಉತ್ತರ ಕರ್ನಾಟಕ ಭಾಗದ ಶಾಸಕರು. ಅವರಿಗೆ ಯಾವ ಸ್ಥಾನ ಕೊಡಬೇಕೆಂಬುದು ಗೊತ್ತಾಗುತ್ತಿಲ್ಲ. ಈಗ ಪ್ರತ್ಯೇಕ ರಾಜ್ಯದ ಕೂಗಿನ ಜೊತೆಗೆ ಮುಖ್ಯಮಂತ್ರಿ ಬದಲಾವಣೆಯ ಕೂಗು ಕೂಡ ಕೇಳಿಬರುತ್ತಿದ್ದು, ಸಿದ್ದರಾಮಯಯ್ಯ ರವರು ಎಲ್ಲವನ್ನೂ ಸರಿಪಡಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಅವರಿಗೆ ಮುಖ್ಯಮಂತ್ರಿ ಸ್ಥಾನವೇ ಸೂಕ್ತ. ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ. 

      ರಾಜ್ಯ ಒಡೆಯುವುದು ಧರ್ಮವಲ್ಲ, ಅಧರ್ಮ. ಎಂದು ರಾಜ್ಯದಲ್ಲಿ ಎದ್ದಿರುವ ಉತ್ತರಕರ್ನಾಟಕ ಪ್ರತ್ಯೇಕ ಕೂಗಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿಯವರು ಹಾಗೆ ಮಾತನಾಡಬಾರದಿತ್ತು. ರಾಜಕೀಯವಾಗಿ ಮುಖ್ಯಮಂತ್ರಿಗಳು ಈ ರೀತಿಯ ಹೇಳಿಕೆ ನೀಡುವುದು ಸೂಕ್ತವಲ್ಲ. ತಕ್ಷಣ ಸಭೆ ಕರೆದು ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು

 

  

LEAVE A REPLY

Please enter your comment!
Please enter your name here