ರಾಜ್ಯ, ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

0
20

ದಾವಣಗೆರೆ:

              ಸಾರ್ವಜನಿಕ ಶಿಕ್ಷಣ ಇಲಾಖೆಯು ಏರ್ಪಡಿಸಿದ್ದ ಪ್ರೌಢಶಾಲಾ ವಿಭಾಗದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಶ್ರೀಸೋಮೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾಲಯದ ವಿದ್ಯಾರ್ಥಿಗಳಾದ ಸೋಮೇಶ್.ಸಿ.ಪಾಟೇಲ್, ದೃವಿಕ.ಎಸ್.ಧೀಕ್ಷಿತ್, ಹಾಗೂ ಅಧಿತಿ.ಯು ‘ಚದುರಂಗ’ ಸ್ಪರ್ಧೆಯಲ್ಲಿ, ರಮ್ಯ, ಆಯೇಷಾ ಸಿದ್ಧಿಕ ‘ಕರಾಟೆ’ ಸ್ಪರ್ಧೆಯಲ್ಲಿ, ಸೃಷ್ಠಿ.ಆರ್ ಈಜು ಸ್ಪರ್ಧೆಯಲ್ಲಿ, ಆದಿತ್ಯ ಎಸ್.ಎಸ್ ಜೂಡೋ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ,
ಹಿರಿಯ ಪ್ರಾಥಮಿಕ ವಿಭಾಗದ ತಾಲೂಕ್ ಮಟ್ಟದ ‘ಲಾಂಗ್ ಜಂಪ್’ನಲ್ಲಿ ಹಂಸರಾಜ್ ಹೆಚ್.ಎಸ್, ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ ರಾಜ್ಯ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಈ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಶಿಕ್ಷಕ ಬಳಗದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here