ರಾಜ್ಯ ಮಟ್ಟದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ

0
34

ಹಾವೇರಿ :

           ನಗರದ ಕೆ ಎಲ್ ಈಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಮೈಸೂರಿನಲ್ಲಿ ನಡೆದಂತಹ ವಿಶ್ವ ಮಾನವ ವಿದ್ಯಾರ್ಥಿ ಯುವವೇದಿಕೆಯ ರಾಜ್ಯ ಮಟ್ಟದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಹಲವಾರು ಪ್ರಶಸ್ತಿಗಳನ್ನುಗಳಿಸಿದ್ದಾರೆ .ಬಿಕಾಂ ವಿಭಾಗದ ಮೇಘನಾ ಪಾಟೀಲ ಹಿಂದಿ ಚಿತ್ರಗೀತೆ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕನ್ನಡ ಚಿತ್ರ ಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಬಿಸಿಎ ವಿಭಾಗದ ಕಿರಣಕುಮಾರ ದೊಡ್ಡಮನಿ ಚರ್ಚಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಲಿಂಗರಾಜ ಕುರುಬರ ಸ್ವರಚಿಯ ಕವನ ವಾಚನದಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ ಹಾಗೂ ಕಿರುನಾಟಕದಲ್ಲಿ ರವಿ ಮಂಜು ಪ್ರಸಾದ ಶಶಿ ಆಕಾಶ ಪವನ ಮನೋಜ ತೌಸಿಫ ಸತೀಶ ಅವರೊನ್ನಳಗೊಂಡ ತಂಡ ನಾಟಕ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದು, ರಾಜ್ಯ ಮಟ್ಟದ ಪುರಸ್ಕಾರಗಳನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ 23 ಜನರ ತಂಡಕ್ಕೆ ಕಾಲೇಜು ಒಕ್ಕೂಟದ ಕಾರ್ಯಧ್ಯಕ್ಷರಾದ ಪ್ರೋ ಡಿ ಎ ಕೊಲ್ಲಾಪುರೆ ಪ್ರೋ ಡಾ ಸಿ ಮಲ್ಲಣ್ಣ ಪ್ರೋ ಸಿದ್ದೆಶ್ವರಯ್ಯ ಹುಣಸಿಕಟ್ಟಿಮಠ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಕೆ ಎಲ್ ಈ ಸಂಸ್ಥೆಯ ಆಡಳಿತ ಮಂಡಳಿ ಸ್ಥಾನಿಕ ಮಂಡಳಿ ಪ್ರಾಚಾರ್ಯರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here