ರಾಯಲ್ಸ್ ವಿರುದ್ಧ ಪಂಜಾಬ್‍ಗೆ 6 ವಿಕೆಟ್‍ಗಳ ಗೆಲುವು

0
27

ಇಂದೋರ್:

ಐಪಿಎಲ್ ಕ್ರಿಕೆಟ್‍ನ 38ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 6 ವಿಕೆಟ್‍ಗಳಿಂದ ಜಯಗಳಿಸಿದೆ. ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್ ರಾಜಸ್ಥಾನವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆರಂಭಿಕ ಆಟಗಾರ ಬಟ್ಲರ್ ಬಿಟ್ಟರೆ ಉಳಿದವರು ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ರಾಯಲ್ಸ್ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 152 ರನ್‍ಗಳನ್ನು ಗಳಿಸಿತು. ಬಟ್ಲರ್ 51, ಸ್ಯಾಮ್ಸನ್ 28, ಗೋಪಾಲ್ 24, ಬೆನ್ 12, ರಾಹುಲ್ 11 ರನ್‍ಗಳನ್ನು ಗಳಿಸಿದರು. 

ಪಂಜಾಬ್ ಪರ ರಹಮಾನ್ 3, ಆಂಡ್ರ್ಯೂ 2, ಪಟೇಲ್ 1, ಅಶ್ವಿನ್ 1, ಅಂಕಿತ್ 1 ವಿಕೆಟ್ ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ರಾಹುಲ್, ಮಾರ್ಕಸ್‍ರವರ ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ 18.4 ಓವರ್‍ಗಳಲ್ಲಿ 4 ವಿಕೆಗಳನ್ನು ಕಳೆದುಕೊಂಡು 155 ರನ್‍ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು. ಲೋಕೇಶ್ ರಾಹುಲ್ ಅಜೇಯ 84, ಮಾರ್ಕಸ್ ಅಜೇಯ 23, ಕರುಣ್ ನಾಯರ್ 31 ರನ್ ಗಳಿಸಿದರು.
ರಾಯಲ್ಸ್ ಪರ ಗೌತಮ್ 1, ಆರ್ಚರ್ 1, ಬೆನ್ 1, ಅನುರೀತ್ 1 ವಿಕೆಟ್ ಗಳಿಸಿದರು.

ಸಂಕ್ಷಪ್ತ ಸ್ಕೋರ್:
ರಾಜಸ್ಥಾನ : 152/9 (20)
ಪಂಜಾಬ್ : 155/4 (18.4)

LEAVE A REPLY

Please enter your comment!
Please enter your name here