‘ರೆಸಾರ್ಟ್‍ನಲ್ಲಿ ರಾಜಕೀಯ ಹೈಡ್ರಾಮ’ – ಶೋಭಾ ಕರಂದ್ಲಾಜೆ

0
74

ಬೆಂಗಳೂರು:

ಬಿಡದಿ ಸಮೀಪದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ನಾಯಕರು ರಾಜಕೀಯ ಹೈಡ್ರಾಮ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಶೋಭಾ ಕರಂದ್ಲಾಜೆ ಜರಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೇ 17 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರ ಮೇಲೆ ನಂಬಿಕೆ ಇಲ್ಲದ ಕಾರಣ ಅವರನ್ನು ಕೂಡಿಟ್ಟಿದ್ದಾರೆ ಎಂದು ಟೀಕಿಸಿದ ಅವರು, 38 ಸೀಟು ಪಡೆದ ಪಕ್ಷವು ಸಿ.ಎಂ.ಆಗಲು ಹೊರಟಿದೆ. ಜನತೆಯಿಂದ ತಿರಸ್ಕøತಗೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ಹೊರಟಿವೆ. ದುರಂಹಕಾರ ಮತ್ತು ಜಾತಿ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಜನರು ತಿರಸ್ಕರಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಪ್ರಜಾತಂತ್ರದ ಅಣಕವಾಗುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here