ರೈತಪರ ಯೋಜನೆಗಳು ಮುಂದುವರಿಯಲಿ

0
22

ತುರುವೇಕೆರೆ:

   ನೂತನ ಸಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್‍ಸ್ವಾಮಿ ಹಿಂದಿನ ಸರ್ಕಾರದ ರೈತ ಪರವಾದ ಯೋಜನೆಗಳನ್ನು ಮುಂದುವರೆಸಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಮಾಜಿ ಶಾಸಕ, ಜಿಲ್ಲಾ ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಒತ್ತಾಯಿಸಿದರು.

      ಪಟ್ಟಣದ ತಾಲೂಕು ಪಂಚಾಯ್ತಿ ಮುಂಬಾಗದಲ್ಲಿ ಗುರುವಾರ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ವತಿಯಿಂದ ತುರುವೇಕೆರೆ ಶಾಖೆಯ ನೂತನವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

      ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರವರು ಚುನಾವಣಾ ಸಮಯದಲ್ಲಿ ತಮ್ಮ ಪ್ರನಾಳಿಕೆಯಲ್ಲಿ ರೈತರು ಮಾಡಿರುವ ಎಲ್ಲ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದರು ಪ್ರಸ್ತುತ ಸಮಿಶ್ರ ಮುಖ್ಯಮಂತ್ರಿಯಾಗಿದ್ದು ಹಣಕಾಸು ಇಲಾಖೆಯು ಅವರ ಕೈಯಲ್ಲಿದ್ದು ಅವರು ಮಂಡಿಸಲಿರುವ ಬಜಟ್‍ನಲ್ಲಿ ರೈತರಿಗೆ ನೀಡಿದ ಮಾತು ಉಳಿಸಬೇಕು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರದ ಬಜಟ್‍ನಲ್ಲಿ ಮಂಡಿಸಿದ್ದ ರೈತ ಪರವಾದ 5 ಲಕ್ಷದವರೆಗೂ ಬಡ್ಡಿ ರಹಿತ ರೈತನಿಗೆ ಸಾಲ, ಮರಣ ಹೊಂದಿದ ರೈತನ ಒಂದು ಲಕ್ಷ ಸಾಲ ಮನ್ನಾ ಸೇರಿದಂತೆ ಹಲವು ರೈತ ಪರ ಯೋಜನೆಗಳನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.

ಭೂಮಿ ರಹಿತರಿಗೂ ಸಾಲ:

      ಪ್ರತಿಯೊಬ್ಬ ರೈತನು ಸಾಲ ಪಡೆಯಲಿ ಎಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಈಗಾಗಲೇ ಒಂದು ಗುಂಟೆ ಜಮೀನು ಹೊಂದಿರುವ ರೈತರಿಗೂ 25000 ಸಾಲ ನೀಡಿ ಸರ್ಕಾರದಿಂದ ಮನ್ನ ಕೂಡ ಹಾಗಿದೆ. ಜಮೀನು ರಹಿತ ಕೂಲಿ ಕಾರ್ಮಿಕರು, ದಿನ ನಿತ್ಯ ವ್ಯಾಪಾರಿಗಳು ಖಾಸಗಿ ಲೇವಾದಾರರಿಂದ ಹೆಚ್ಚು ಬಡ್ಡಿಗೆ ಹಣ ಪಡೆಯುತ್ತಿದ್ದು ತುರುವೇಕೆರೆ ಶಾಖೆಯಿಂದಲೇ ಭೂಮಿ ರಹಿತ ವ್ಯಾಪಾರಿಗಳಿಗೆ ಸಾಲ ನೀಡಲು ಚಿಂತನೆ ಮಾಡಲಾಗುವುದು ಎಂದರು.

      ಸಂಸದ ಎಸ್.ಪಿ. ಮುದ್ದಹನುಮೇಗೌಡ ಜನರ ಹಣ, ಒಡವೆಗಳು ರಾಷ್ಟ್ರೀಕೃತ ಬ್ಯಾಂಕ್‍ಗಳು ಸಹ ಇಂದು ಸುರಕ್ಷಿತ ಇಲ್ಲದಂತಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು ವಿಜಯ್ ಮಲ್ಯ, ನೀರವ್ ಮೋಧಿಯಂತವರಿಗೆ ಸಾವಿರಾರು ಕೋಟಿ ಸಾಲ ನೀಡಿದ್ದು ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿದ್ದು ಆರ್‍ಬಿಐ ಲಕ್ಷಂತಾರ ಕೋಟಿ ರೂಗಳನ್ನು ವಸೂಲಾಗದ ಸಾಲ (ಎನ್.ಪಿ.ಎ) ಎಂದು ಹೇಳಿ ಮನ್ನಾ ಮಾಡುತ್ತಿವೆ ಎಂದ ಅವರು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೂ ಸರಿ ಸಮನಾಗಿ ಡಿಸಿಸಿ ಬ್ಯಾಂಕ್ ವ್ಯವಹಾರ ಮಾಡುತ್ತಿದೆ ಎಂದರು.

      ಶಾಸಕ ಮಸಾಲಜಯರಾಮ್ ಮಾತನಾಡಿ ಡಿಸಿಸಿ ಬ್ಯಾಂಕ್ ತಾಲೂಕಿನ ರೈತರಿಗೆ ಸೇವೆಯನ್ನು ನೀಡುತ್ತಿದ್ದು ಇನ್ನು ಮುಂದೆ ಇನ್ನು ಹೆಚ್ಚಿನ ಸೇವೆಯನ್ನು ನೀಡಲಿ ಎಂದು ತಿಳಿಸಿದರು.

 

LEAVE A REPLY

Please enter your comment!
Please enter your name here