ರೈತರು ಸರ್ಕಾರಿ ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯ.

0
32

ಕೂಡ್ಲಿಗಿ:

      ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕ ಮಳೆ ಇಲ್ಲದೆ ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ್ದ ಜೋಳ ಹಾಗೂ ಮೆಕ್ಕೆ ಜೋಳ ಬೆಳವಣಿಗೆಯಲ್ಲಿ ಕುಂಟಿತಗೊಂಡಿದ್ದು, ಬೆಳೆ ನಷ್ಟವಾಗಿರುವ ಬಗ್ಗೆ ತಾಲ್ಲೂಕಿನಾದ್ಯಂತ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ತಿಳಿಸಿದ್ದಾರೆ.ಅವರು ಕೂಡ್ಲಿಗಿ ಹಾಗೂ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಕೆಲ ರೈತರ ಹೊಲಗಳಿಗೆ ಭೇಟಿ ನೀಡಿ ಮಾತನಾಡಿದರು.

      ಜೋಳ ಹಾಗೂ ಮೆಕ್ಕೆ ಜೋಳದ ಬಿತ್ತನೆ ಮಾಡಿ ಈಗಾಗಲೇ ಸುಮಾರು 80 ದಿನಗಳು ಕಳೆದು ಹೋಗಿವೆ. ಇದರಿಂದ ಈಗ ಮಳೆ ಬಂದರೂ ಅವುಗಳಲ್ಲಿ ತೆನೆ ಬಿಟ್ಟು ಕಾಳು ಕಟ್ಟುವ ಯಾವುದೇ ಭರವಸೆ ಇಲ್ಲ. ಇದರಿಂದ ರೈತರು ಈ ಬೆಳೆಗಳನ್ನು ಕಿತ್ತು ಹಾಕುತ್ತಿದ್ದು, ಬೆಳೆ ನಷ್ಟದ ಬಗ್ಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯ್ತಿ ವತಿಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

      ಮುಂಗಾರಿನಲ್ಲಿ ಉತ್ತಮವಾಗಿ ಸುರಿದ ಮಳೆ ನಂತರ ಸಂಪೂರ್ಣ ಕೈಕೊಟ್ಟೀದೆ. ಮುಂದೆ ಮಳೆ ಬಂದರೆ ಪರ್ಯಯವಾಗಿ ರೈತರು ಯಾವ ಬೆಳೆಯನ್ನು ಬೆಳೆಯಬೇಕು ಎಂಬುದರ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡಲಾಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ್ ತಿಳಿಸಿದರು.

      ಈಗ ಬಿತ್ತನೆ ಮಾಡಿರುವ ಜೋಳ, ಮೆಕ್ಕೆ ಜೋಳ, ಹತ್ತಿ, ಸೂರ್ಯಕಾಂತಿ ಬೆಳೆಗಳಿಗೆ ಇದೇ 31ರವರೆಗೂ ಬೆಳೆ ವಿಮೆ ಮಾಡಿಸಲು ಅವಕಾಶವಿದ್ದು, ರೈತರು ಬೆಳೆ ವಿಮೆ ಮಾಡಿಸಿದಲ್ಲಿ ಮುಂದೆ ಹೆಚ್ಚು ಅನುಕೂಲವಾಗಲಿದೆ. ಬಿತ್ತನೆ ಮಾಡಿದ ಬೆಳೆಗಳನ್ನು ಕೀಳುವ ಮುನ್ನಾ ರೈತರು ತಮ್ಮ ಪಹಣೆಯಲ್ಲಿ ಬೆಳೆ ನಮೂದು ಮಾಡಬೇಕು ಎಂದು ಅವರು ತಿಳಿಸಿದರು. ತಾಲ್ಲೂಕು ಪಂಚಾಯ್ತಿ ಯೋಜನಾಧಿಕಾರಿ ಬೋರಣ್ಣ ಇದ್ದರು. 

LEAVE A REPLY

Please enter your comment!
Please enter your name here