ರೈತರ ಮೂರು ಬಣವೆ ಭಸ್ಮ, ಬೆಂಕಿ ನಂದಿಸಲು ಅಗ್ನಿಶಾಮಕದಳ ಹರಸಹಾಸ

0
41

 ಕಂಪ್ಲಿ:

      ನಗರದ ಸೋಮಪ್ಪ ಕೆರೆಯ ಪಕ್ಕದಲ್ಲಿ ಮೂರು ಬಣವೆಗೆ ಬೆಂಕಿ ಬಿದ್ದಿದೆ, ಮಹನಂದಿ, ರಾಘವೇಂದ್ರ, ವೆಂಕಟರಮಣ ಇವರಿಗೆ ಸೇರಿದ ಬಣವೆ ಸುಟ್ಟು ಹೋಗುತ್ತಿರುವುದನ್ನು ನೋಡಿದ ಪಾದಚಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಮುಂದಾಗಿದ್ದಾರೆ. ನಂತರ ಅಗ್ನಿಶಾಮಕದಳದವರು ಪಕ್ಕದಲ್ಲಿಯೆ ಇರುವ ಸೋಮಪ್ಪ ಕೆರೆಯ ನೀರಿನಿಂದ ಬೆಂಕಿ ನಂದಿಸಲು ಮುಂದಾದರಾದರೂ ಬೆಂಕಿ ನಂದಿಸುವಷ್ಟರಲ್ಲಿ ಮೂರು ಬಣವೆಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದಾವೆ.

      ಈ ಬಣವೆಗಳ ಮಾಲಿಕರೊಬ್ಬರು ಹೇಳುವ ಪ್ರಕಾರ ಬಣವೆ ಪಕ್ಕದ ದಾರಿ ಪ್ರಥಮ ಧರ್ಜೆ ಕಾಲೇಜಿಗೆ ಸಮೀಪವಾಗುವುದರಿಂದ ಕಾಲೇಜಿನ ವಿಧ್ಯಾರ್ಥಿಗಳು ಹೆಚ್ಚಾಗಿ ಓಡಾಡುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಈ ಘಟನೆ ನಡೆದಿರುವುದರಿಂದ ಯಾರೊ ಕಾಲೇಜಿನ ಕಿಡಿಗೇಡಿ ವಿಧ್ಯಾರ್ಥಿಗಳೆ ಈ ಕೃತ್ಯ ಮಾಡಿದ್ದಾರೆಂದು ನೊಂದ ಬಣವೆ ಮಾಲಿಕರು ಆರೋಪಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತನಿಖೆಯಾಗಬೇಕಿದೆ. ಸುಟ್ಟ ಬಣವೆಗಳು 30 ಎಕರೆ ಒಣಹುಲ್ಲುಗೊಂದರಂತೆ ಒಟ್ಟು ಮೂರು ಬಣವೆಗೆ ಸಂಬಂದಿಸಿದಂತೆ 90ಎಕರೆ ಒಣಹಲ್ಲಿನ ಬಣವೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here