ರೈತ ನೇಣಿಗೆ ಶರಣು

0
23

ದಾವಣಗೆರೆ:

      ಸಾಲಬಾಧೆಯಿಂದ ಬೇಸತ್ತ ರೈತನೋರ್ವ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

      ಗ್ರಾಮದ ಬಿ.ಸಿ. ಹಾಲೇಶ್ (28) ನೇಣಿಗೆ ಶರಣಾದ ರೈತನಾಗಿದ್ದು, ರೈತ ಹಾಲೇಶ್ ಕೃಷಿ ಚಟುವಟಿಕೆಗಳಿಗೆ ಹರಿಹರದ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ 2017ರಲ್ಲಿ 8 ಲಕ್ಷ, ಹೊಳೆಸಿರಿಗೆರೆಯ ಪಿಜಿಬಿ ಬ್ಯಾಂಕ್‍ನಲ್ಲಿ 1 ಲಕ್ಷ, ಸಹಕಾರಿ ಬ್ಯಾಂಕ್‍ನಲ್ಲಿ 65 ಸಾವಿರ ರು ಹಾಗೂ ಕೈಗಡವಾಗಿ ಸುಮಾರು 5 ಲಕ್ಷ ರು. ಸಾಲ ಸೇರಿ ಸುಮಾರು 15 ಲಕ್ಷ ಸಾಲ ಮಾಡಿದ್ದರು. ಆದರೆ, ಸತತ ಬರಗಾಲದಿಂದ ಸಾಲ ತೀರಿಸುವ ಬಗೆ ತಿಳಿಯದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಮಲೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here