ರೈತ ಸೊರಗಿದರೆ ದೇಶವೆ ಸೊರಗುತ್ತದೆ : ಶಾಸಕ ಎಂ.ವಿ.ವೀರಭದ್ರಯ್ಯ

0
29

 ಮಧುಗಿರಿ:

  ಅನ್ನ ನೀಡುವ ರೈತನ ಪರಿಸ್ಥಿತಿ ಕಷ್ಟದ ದಿನಗಳಿಂದ ಕೂಡಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರಕಾರದ ಜೊತೆಗೆ ವಿಜ್ಞಾನಿಗಳು, ಸರ್ಕಾರಿ ಇಲಾಖೆಗಳು, ಸಮಾಜದ ಪ್ರತಿಯೊಬ್ಬರು ರೈತರ ಸಮಗ್ರ ಅಭಿವೃದ್ಧಿಯತ್ತ ಧಾವಿಸಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಕರೆ ನೀಡಿದರು.

      ಅವರು ಗುರುವಾರ ಪಟ್ಟಣದ ಶಿರಾಗೇಟ್ ಬಳಿ ಇರುವ ತಾ.ಪಂ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಸಬಾ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ದಿನಗಳಲ್ಲಿ ಮಳೆ ಅಪರೂಪವಾಗುತ್ತಿದ್ದು, ವ್ಯವಸಾಯ ನಂಬಿರುವ ರೈತ ವಲಸೆ ಹೋಗುತ್ತಿದ್ದಾನೆ. ಸಂಕಷ್ಟದಲ್ಲಿರುವ ರೈತನ ಬಗ್ಗೆ ಪ್ರತಿಯೊಬ್ಬರು ಇಂದು ಚಿಂತಿಸಬೇಕಿದೆ. ರೈತ ವ್ಯವಸಾಯ ನಂಬಿ ಸರಿಯಾಗಿ ಮಳೆ ಬರದೆ ಇಟ್ಟ ಬೆಳೆಯೂ ಕೈಗೆ ಸಿಗದೆ ಜೀವನೋಪಾಯಕ್ಕಾಗಿ ವಲಸೆ ಹೋಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತ ಸೊರಗಿದರೆ ಇಡೀ ದೇಶ ಸೊರಗಿದಂತೆ. ನೋಟು ತಿಂದು ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದರು.

      ಬೆಳೆಯುವ ಕೈಗಳು ಇಂದು ದಿನೇ ದಿನೇ ಕ್ಷೀಣಿಸುತ್ತಿವೆ. ಆಹಾರಕ್ಕಾಗಿ ಹಾಹಾಕಾರದ ದಿನಗಳು ಎದುರಾಗುವುದರಲ್ಲಿ ಸಂಶಯವೇ ಇಲ್ಲ. ಮುಂದೆ ಬರಬಹುದಾದ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಸಾಗಿದಾಗ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ ಎಂದು ತಿಳಿಸಿದರು.

      ತಾ.ಪಂ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಸೊಸೈಟಿ ರಾಮಣ್ಣ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಗೋವಿಂದರೆಡ್ಡಿ, ಜೆಡಿಎಸ್ ಕಾರ್ಯಾಧ್ಯಕ್ಷ ಡಾ.ಶಿವಕುಮಾರ್, ಮುಖಂಡ ಸೋಂಪುರ ಸಿದ್ದಪ್ಪ, ನೀರಕಲ್ಲು ರಾಮಕೃಷ್ಣಪ್ಪ, ಫಿಕಾರ್ಡ್ ಬ್ಯಾಂಕ್ ನಿರ್ದೇಶಕ ಚೌಡಪ್ಪ, ಜಿಲ್ಲಾ ಕೃಷಿ ಜಂಟಿ ಸಹಾಯಕ ನಿರ್ದೇಶಕ ಜಯಸ್ವಾಮಿ, ಪಶುವೈದ್ಯಾಧಿಕಾರಿ ಸಿದ್ದಲಿಂಗಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಭಾಗ್ಯಮ್ಮ, ಚೇತನ್ ಹಾಗೂ ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here