ಲಂಡನ್ : ಇಂದಿನಿಂದ ಎರಡನೇ ಟೆಸ್ಟ್ : ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧತೆ

0
70

ಲಂಡನ್ :

      ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ ಆಟಗಾರರು ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರೀ ತಾಲೀಮು ನಡೆಸಿದ್ದಾರೆ.

      ಲಾರ್ಡ್ ಮೈದಾನದಲ್ಲಿ ಇಂದಿನಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಟೀ ಇಂಡಿಯಾ ಆಟಗಾರರು ಭರ್ಜರಿ ತಾಲೀಮು ನಡೆಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ತಾಲೀಮಿ ನಡೆಸಿದ್ದು, ಇಂಗ್ಲೆಂಡ್ ಮಣಿಸುವ ತಂತ್ರ ರೂಪಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಬ್ಬರು ಸ್ಪಿನ್ನರ್ ಗಳು ಪೀಲ್ಡ್ ನಲ್ಲಿರುವುದು ನಿಶ್ಟಿತ ಆದರೆ, ಇದು ತಂಡದ ಸಮತೋಲನದ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ. ಸ್ಪಿನ್ನರ್ ಗಳಿಂದ ಉತ್ತಮ ಆಟವನ್ನು ನಿರೀಕ್ಷಿಸುವುದಾಗಿ ಅವರು ತಿಳಿಸಿದ್ದಾರೆ.

      ಟೀಂ ಇಂಡಿಯಾ ಆಟಗಾರರ ತಾಲೀಮು ವೇಳೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಪುತ್ರ ಅರ್ಜುನ್ ತೆಂಡೊಲ್ಕರ್ ಕೂಡಾ ಪಾಲ್ಗೊಂಡು ಭಾರತೀಯ ಆಟಗಾರರಿಗೆ ನೆರವು ನೀಡಿದರು.

LEAVE A REPLY

Please enter your comment!
Please enter your name here