ಲಾಭದಾಯಕ ಬೆಳೆ ಬೆಳೆಯಲು ಕರೆ

0
17

ಕೊರಟಗೆರೆ
ರೈತರು ಹೆಚ್ಚು ಲಾಭದಾಯಕ ತರುವಂತಹ ಬೆಳೆಗಳನ್ನ ಬೆಳೆಯುವುದರ ಮೂಲಕ ಆರ್ಥಿಕವಾಗಿ ಸದೃಢವಾಗಬೇಕು ಎಂದು ಮಾಜಿ ಶಾಸಕ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾ.ಪಂ. ವ್ಯಾಪ್ತಿಯ ಸೋಂಪುರ ಗ್ರಾಮದ ವಿಎಸ್‍ಎಸ್‍ಎನ್ ಆವರಣದಲ್ಲಿ ಏರ್ಪಡಿಸಲಾಗಿದ್ದ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ರೈತರು ಉತ್ಪಾದನೆ ಮಾಡಿದಂತಹ ವಸ್ತುಗಳಿಗೆ ಹೆಚ್ಚು ಬೆಲೆ ದೊರಕುವ ರೀತಿಯ ವಾತಾವರಣ ಸೃಷ್ಟಿಯಾಗಬೇಕು. ರೈತರು ಬೆಳೆದಂತಹ ಬೆಳೆಗಳನ್ನ ಮಧ್ಯವರ್ತಿಗಳು ಕೊಳ್ಳುವುದರಿಂದ ರೈತರಿಗೂ ಅನ್ಯಾಯವಾದರೆ ಇನ್ನೊಂದು ಕಡೆ ಗ್ರಾಹಕರಿಗೂ ಅನ್ಯಾಯವಾಗುತ್ತಿದ್ದು, ರೈತರಿಗೆ ಮಧ್ಯವರ್ತಿಗಳ ಹಾವಳಿಯನ್ನ ತಪ್ಪಿಸಲು ನಮ್ಮ ಸಹಕಾರ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

ಕೊರಟಗೆರೆ ತಾಲ್ಲೂಕಿಗೆ ಅತಿಹೆಚ್ಚು ರೈತರಿಗೆ ಡಿಸಿಸಿ ಬ್ಯಾಂಕ್‍ನಿಂದ ಸಾಲವಿತರಣೆ ಮಾಡಲಾಗಿದೆ. ಗ್ರಾಮಿಣ ಭಾಗದ ರೈತರ ಅನುಕೂಲಕ್ಕಾಗಿ ಸ್ವಸಹಾಯ ಸಂಘ ಮಾಡಲಾಗಿದ್ದು,ಸಹಕಾರ ಬ್ಯಾಂಕುಗಳಿಗೆ ರೈತರೇ ಆಧಾರ ಸ್ಥಂಭವಾಗಿದ್ದಾರೆ. ರೈತರು ದಿನನಿತ್ಯ ವಿಎಸ್‍ಎಸ್‍ಎನ್ ಮತ್ತು ಡಿಸಿಸಿ ಬ್ಯಾಂಕ್‍ಗಳಲ್ಲಿ ತಮ್ಮ ವಹಿವಾಟು ಮಾಡುವುದರ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಹನುಮಾನ್ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ, ಕೃಷಿಕರಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಸಾಲದ ಸೌಲಭ್ಯ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಆರಂಭದಿಂದಲೂ ಜನರಿಗೆ ಹತ್ತಿರವಾಗಿದ್ದು, ರೈತರು ತಮ್ಮಲ್ಲಿರುವ ಹಣವನ್ನ ವಿಎಸ್‍ಎಸ್‍ಎನ್ ಮತ್ತು ಡಿಸಿಸಿ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ಸಹಕಾರಿ ಬ್ಯಾಂಕ್‍ಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರಿ ಸಿಜಿಎಂ ಪ್ರಕಾಶ್, ಜಿಎಂ ಕುಪೇಂದ್ರ ನಾಯ್ಕ್, ರಾಮ್ ಪ್ರಸಾದ್, ರಾಮಯ್ಯ, ಬೋರಣ್ಣ, ಲೋಕೇಶ್‍ಕುಮಾರ್, ಎಪಿಎಂಸಿ ಸದಸ್ಯ ಜಯರಾಮ್, ವಿಎಸ್‍ಎಸ್‍ಎನ್ ಅಧ್ಯಕ್ಷರಾದ ಸೈಯದ್ ರಿಯಾಸತ್ ಅಲಿ, ಶಿವಕುಮಾರ್ ಈಶ ಪ್ರಸಾದ್, ಹೊಳವನಹಳ್ಳಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ಕಾರ್ಯದರ್ಶಿಗಳಾದ ಸತೀಶ್, ಬಾಬು, ರಾಜಣ್ಣ, ರಾಘವೇಂದ್ರ, ತಮ್ಮಯ್ಯ, ಚಲುವರಾಜು, ಕುಮಾರ್, ರಂಗಣ್ಣ, ರಮೇಶ್, ಹನುಮಂತರಾಯಪ್ಪ, ದೊಡ್ಡೇಗೌಡ, ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here