ಲಾಲ್ ಬಾಗ್ : 60 ರಿಂದ 70 ರೂ.ಗೆ ಏರಿಕೆಯಾದ ಪ್ರವೇಶ ಶುಲ್ಕ

0
17

ಬೆಂಗಳೂರು:

Related image

        ಆ.4ರಿಂದ 15 ರವರೆಗೆ ಲಾಲ್ ಬಾಗ್ ನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಪ್ರವೇಶ ಶುಲ್ಕವನ್ನು ಬರೋಬ್ಬರಿ 70 ರೂ.ಗೆ ಏರಿಸಲಾಗಿದೆ.

      ಮನೋರಂಜನೆಗೂ ಜಿ.ಎಸ್.ಟಿ ತೆರಿಗೆ ವಿಧಿಸಿರುವುದರಿಂದ ಕಳೆದ ಬಾರಿಯ ಪ್ರವೇಶ ಶುಲ್ಕ 60 ರೂ. ನಿಂದ 70 ರೂ.ಗೆ ಏರಿಕೆ ಮಾಡಲಾಗಿದ್ದು, ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಶುಲ್ಕ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ.

      ದರ ಏರಿಕೆಯು ರಜೆ ಮತ್ತು ವಾರದ ಎಲ್ಲಾ ದಿನಗಳಿಗೂ ಅನ್ವಯವಾಗಲಿದೆ. ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 20 ರೂ. ನಿಗದಿಯಾಗಿದೆ.

LEAVE A REPLY

Please enter your comment!
Please enter your name here