ಲಿಂಗಪೂಜೆ ನಮ್ಮ ದೇಶದ ಸಂಸ್ಕತಿ:-ಮಹೇಶ್ವರ ಸ್ವಾಮೀಜಿ

0
28

 ಹಗರಿಬೊಮ್ಮನಹಳ್ಳಿ:

      ಲಿಂಗಪೂಜೆಯಲ್ಲಿ ತೊಡಗಿಕೊಂಡರೆ ಮಹತ್ತರವಾದ ಶಕ್ತಿ ಅಡಗಿದೆ, ಲಿಂಗಪೂಜೆ ಎನ್ನುವುದು ನಮ್ಮ ಭಾರತ ದೇಶದ ಸಂಸ್ಕತಿಯಾಗಿದೆ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಹೇಳಿದರು.

      ಅವರು ಪಟ್ಟಣದ ಶ್ರೀಹಾಲಸ್ವಾಮಿ ಮಠದಲ್ಲಿ ಕಳೆದ 15ದಿನಗಳಿಂದ ಮಠದ ಶ್ರೀಹಾಲಶಂಕರ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ರುದ್ರಪಠಣ ಅಧ್ಯಾಯನ ಶಿಬಿರದ ಸಮರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶೇಷವಾಗಿ ರುದ್ರಪಠಣದಲ್ಲಿ ಮಹಿಳೆಯರು ಪಾಲ್ಗೊಂಡು ಕಲಿಯುತ್ತಿರುವುದು ಸಾರ್ಥಕ ಜೀವನವಾಗಿದೆ ಎಂದರು. ಇದರಿಂದ ಸಂಸ್ಕಾರಕ್ಕೊಳಗಾಗಿ ಮನುಷ್ಯನ ನರನಾಡಿಗಳು ಜಾಗೃತಗೊಳ್ಳುತ್ತವೆ. ಅಲ್ಲದೆ ಅನೇಕ ರೋಗ-ರುಜೀನಗಳು ದೂರವಾಗುತ್ತವೆ. ಇಂತಹ ಕಾರ್ಯಗಳು ಕೈಗೂಡುವುದು ಸುಲಭದ ಮಾತಲ್ಲವೆಂದರು. ವೀರಶೈವ ಧರ್ಮ ಜ್ಞಾನರ್ಜನೆಯಲ್ಲಿ ವಿಶಾಲವಾದುದ್ದು. ಲಿಂಗವನ್ನು ಧರಿಸಿ ಪೂಜೆಗೈದರೆ ಮನಸ್ಸು ಮತ್ತು ದೇಹ ಪರಿಶುದ್ಧವಾಗುತ್ತದೆ ಎಂದರು.

      ಶಿಬಿರದ ಕೇಂದ್ರ ಬಿಂದುವಾಗಿದ್ದ ಪುಟ್ಟರಾಜ ಗವಾಯಿಗಳ ಶಿಶ್ಯರಾದ ಶೇಖರಯ್ಯ ಶಾಸ್ತ್ರಿಗಳು ಮಾತನಾಡಿ, 15ದಿನಗಳ ಕಾಲ ರುದ್ರಪಠಣದಲ್ಲಿ ತೊಡಗಿದ್ದ ಮಹಿಳೆಯರು ಶ್ರದ್ಧೆ ಮತ್ತು ಆಸಕ್ತಿಯಿಂದ ಕಲಿತಿದ್ದಾರೆ. ಇದು ಇಲ್ಲಿಗೆ ನಿಲ್ಲದೆ ನಿಮ್ಮ ಮನೆಯಲ್ಲಿರುವ ಸದಸ್ಯರೆಲ್ಲರನ್ನು ತೊಡಗಿಸಿಕೊಳ್ಳುವ ಮೂಲಕ ನಿತ್ಯ ಲಿಂಗಪೂಜೆ ಮತ್ತು ರುದ್ರಪಠಣವನ್ನು ಮಾಡಬೇಕು ಎಂದರು.

      ‘ರುದ್ರಪಠಣ ಅಧ್ಯಾಯನ ಬಹಳ ಕಠಿಣವಾದುದ್ದು, ರುದ್ರ ಪಠಣಗೈಯುತ್ತಿದ್ದರೆ ಸಾಕ್ಷತ್ ಪರಮಾತ್ಮನನ್ನೆ ಮೆಚ್ಚುಸುವಂತ ಶಕ್ತಿ ಇದಕ್ಕಿದೆ. ಶಿಬಿರದಲ್ಲಿ ಕಲಿತದ್ದನ್ನು ಮುಂದಿನ ದಿನದಲ್ಲಿ ಪಟ್ಟಣದ ನಾನಾ ದೇಗುಲಗಳಲ್ಲಿ ವಾರಕ್ಕೊಮ್ಮೆ ಪೂಜೆಯೊಂದಿಗೆ ರುದ್ರಪಠಣ ಅಧ್ಯಾಯನ ಕೈಗೊಳ್ಳಿ, ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇನ್ನಷ್ಟು ಮಹಿಳೆಯರು ಈ ಪರಿಪಾಠ ಬೆಳಸಿಕೊಳ್ಳಲಿ.’-ಹಾಲಶಂಕರ ಸ್ವಾಮೀಜಿ. ಶ್ರೀಹಾಲಸ್ವಾಮಿ ಮಠ. ಹ.ಬೊ.ಹಳ್ಳಿ. ಶಿಬಿರಾರ್ಥಿಗಳಾದ ರೇಣುಕಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ಇಂದುಮತಿ, ಪುರಸಭೆ ಸದಸ್ಯೆ ಕವಿತಾ ಹಾಲ್ದಾಳ್, ಎಚ್.ಎಂ.ಲಲಿತಮ್ಮ, ಅನ್ನಪೂರ್ಣಮ್ಮ, ಕೆ.ಎಂ.ಪುಷ್ಪ, ಆರ್.ರತ್ನಮ್ಮ, ಬಿ.ಶೈಲಜ ಸೇರಿ ಅನೇಕ ಮಹಿಳೆಯರು ಲಿಂಗಪೂಜೆ ನೆರವೇರಿಸಿದರು.       

      ಮಠದ ಕಾರ್ಯಕರ್ತರಾದ ಖಾನಾವಳಿ ಬಸವರಾಜಪ್ಪ, ಶ್ರೀಶೈಲ, ಬಿ.ಜಿ.ಬಡಿಗೇರ್, ಸಿದ್ದಣ್ಣ ಬಡಿಗೇರ್, ಉಮಾಪತಿ ಸ್ವಾಮಿ, ಮಹಾಂತಯ್ಯ, ಮಹಾಬಲೇಶ್ವರ ರೆಡ್ಡಿ, ಜಿ.ಮಲ್ಲಣ್ಣ, ರಾಜ, ಬುಳ್ಳಜ್ಜ, ಆಡಿಟರ್ ಶರಣ ಬಸಪ್ಪ, ನಾಗರಾಜ, ಮುಖಂಡರಾದ ಹಾಲ್ದಾಳ್ ವಿಜಯಕುಮಾರ್, ಶಂಭಣ್ಣ, ವಿರುಪಾಕ್ಷಿ, ಪಟ್ಟೇದ್ ಕೊಟ್ರೇಶ್, ವಿರುಪಾಕ್ಷಿ ಗೌಡ್ರು, ಸಣ್ಣ ನೀರಾವರಿ ಎಇ ವಿನಾಯಕ ಮತ್ತಿತರರು ಇದ್ದರು.  

LEAVE A REPLY

Please enter your comment!
Please enter your name here