ಸಿದ್ದು ಹೇಳಿಕೆ ತಿರುಚಲಾಗಿದೆ: ಡಿಸಿಎಂ

0
10

 ಬೆಂಗಳೂರು:

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

     ಇಂದು ಬೆಂಗಳೂರಿನ  ಕೆಪಿಸಿಸಿ ಕಚೇರಿಯಲ್ಲಿ  ಕಾಂಗ್ರೆಸ್‌ ನಾಯಕರ ಜೊತೆ ಸಭೆ ನಡೆಸಿದ ಬಳಿಕ  ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಹೇಳಿಕೆ ನೀಡಿರುತ್ತಾರೆ. ಅವರ ಹೇಳಿಕೆಗಳನ್ನು ತಿರುಚಲಾಗಿದೆ. ಸಭೆಯಲ್ಲಿ ಮುಂಬರು  ಲೋಕಸಭಾ ಚುನಾವಣೆ ಕುರಿತು ರಣನೀತಿ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಿದರು.

        ಸರ್ಕಾರದ ಕಾರ್ಯದರ್ಶಿ ರತ್ನಪ್ರಭ ಅವರ ಸೇವಾವಧಿ ಕಡಿತದ ಬಗ್ಗೆ ಮಾಹಿತಿ ಇಲ್ಲ. ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಸಂಪುಟ ವಿಸ್ತರಣೆಗೆ ಸಂಬಂದಿಸಿದಂತೆ ನಮ್ಮ ಹಂತದಲ್ಲಿ ಚರ್ಚೆ ನಡೆದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here