ವಂಚಕ ನಕಲಿ ಐಟಿ ಅಧಿಕಾರಿ ಬಂಧನ

0
13

ದಾವಣಗೆರೆ:

     ತಾನು ಸರ್ಕಾರಿ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಸಾರ್ವಜನಿಕರನ್ನು ನಂಬಿಸಿ, ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ವಂಚಕನೊಬ್ಬನನ್ನು ಡಿಸಿಪಿ ಪೆÇಲೀಸರು ಬಂಧಿಸಿದ್ದಾರೆ.

      ತಾಲ್ಲೂಕಿನ ವಡ್ಡಿನಹಳ್ಳಿ ಗ್ರಾಮದ ವಾಸಿ ಗಂಗಾಧರ ಬಂಧಿತನಾಗಿದ್ದು, ಈತ ಶಿಕಾರಿಪುರ ತಾಲ್ಲೂಕು ನೆಲವಾಗಿಲು ಗ್ರಾಮದ ಚಂದ್ರಪ್ಪ ಮತ್ತು ಆತನ ಕಡೆಯವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂಬುದಾಗಿ ನಂಬಿಸಿ ಕಂದಾಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 22 ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಎಂಬುದಾಗಿ ಮೂಲಗಳು ತಿಳಿಸಿವೆ.

      ಈ ಬಗ್ಗೆ ಚಂದ್ರಪ್ಪ ಎಂಬುವರು ಜು.25,2018ರಂದು ನಗರದ ಡಿಸಿಬಿ ವಿಶೇಷ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸ್ಪಿ ಚೇತನ್ ಹಾಗೂ ಎಎಸ್ಪಿ ಉದೇಶ ಮಾರ್ಗದರ್ಶನದಲ್ಲಿ ಡಿಸಿಬಿ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ವಿ. ದೇವರಾಜ್ ನೇತೃತ್ವದಲ್ಲಿ ಸಿಬ್ಬಂಧಿಗಳಾದ ಪ್ರಕಾಶ್, ರವಿ, ಲೋಹಿತ್, ವೀರಭದ್ರಪ್ಪ, ರಮೇಶ್, ಪ್ರಕಾಶ್ ರಾವ್ ತಂಡ ಇಂದು ಆರೋಪಿಯನ್ನು ಬಂಧಿಸಿ ಈತನಿಂದ 2 ಲಕ್ಷದ 17 ಸಾವಿರ ರೂ. ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

      ಇದಲ್ಲದೇ, ಆರೋಪಿ ಗಂಗಾಧರ 2015ರಲ್ಲಿ ತಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here