ವಯೋವೃದ್ಧ ತಂದೆ-ತಾಯಿಗಳನ್ನು ತೊರೆದರೆ 6 ತಿಂಗಳು ಜೈಲು

0
11

ಹೊಸದಿಲ್ಲಿ

ವಯೋವೃದ್ಧ ತಂದೆತಾಯಿಗಳನ್ನು ತೊರೆದರೆ ಅಥವಾ ದೌರ್ಜನ್ಯ ನಡೆಸಿದರೆ ನಿಗದಿ ಪಡಿಸಲಾಗಿದ್ದ 3 ತಿಂಗಳ ಶಿಕ್ಷೆಯನ್ನು 6 ತಿಂಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಮಕ್ಕಳ ವ್ಯಾಖ್ಯಾನವನ್ನು ವಿಸ್ತರಿಸಿ ದತ್ತು ಅಥವಾ ಮಲ ಮಕ್ಕಳು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕಾನೂನುಬದ್ಧ ರಕ್ಷಕರಿಂದ ಪ್ರತಿನಿಧಿಸುವ ಅಪ್ರಾಪ್ತರನ್ನು ಈ ಪಟ್ಟಿಯಲ್ಲಿ ಸೇರಿಸುವಂತೆ ಪೋಷಕರ ಮೇಲ್ವಿಚಾರಣೆ ಮತ್ತು ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಾಯಿದೆ 2007ನ್ನು ಪರಿಶೀಲಿಸುತ್ತಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿಯವರೆಗೆ ಸ್ವಂತ ಮಕ್ಕಳು ಮತ್ತು ಮೊಮ್ಮಕ್ಕಳು ಮಾತ್ರ ಕಾಯಿದೆಯ ಪರಿಧಿಯೊಳಗೆ ಬರುತ್ತಿದ್ದರು.

ಹಿರಿಯ ನಾಗರಿಕರ ಮೇಲ್ವಿಚಾರಣೆ ಮತ್ತು ಕಲ್ಯಾಣ ಕಾಯಿದೆ ಕರಡು ಪ್ರತಿಯನ್ನು ಸಿದ್ಧ ಪಡಿಸಲಾಗಿದ್ದು ಇದು ಅನುಮೋದನೆಗೊಂಡರೆ ಅಸ್ತಿತ್ವದಲ್ಲಿರುವ ಕಾಯಿದೆ ರದ್ದುಗೊಳ್ಳುತ್ತದೆ.

 

LEAVE A REPLY

Please enter your comment!
Please enter your name here