ವಾಜಪೇಯಿ ಭೇಟಿಯಾದ ಮೋದಿ

0
15

ದೆಹಲಿ:

ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೇಟಿ ಮಾಡಿದರು.

      ಏಮ್ಸ್(All India Institutes of Medical Sciences) ಆಸ್ಪತ್ರೆಯಲ್ಲಿ ಸ್ಥಾಪಿಸಲು ಯೋಚಿಸಿರುವ ವೃದ್ಧರಿಗಾಗಿ ವಿಶೇಷ ಘಟಕಕ್ಕೆ ಅಡಿಪಾಯ ಹಾಕಿದ ಅವರು, ನಂತರ ಇದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ವಾಜಪೇಯಿ ಅವರನ್ನು ಭೇಟಿಯಾದರು. 

      ಜೂನ್ 11 ರಂದು ಮೂತ್ರಪಿಂಡ ಸಂಬಂಧೀ ಕಾಯಿಲೆಯಿಂದ ವಾಜಪೇಯಿ ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಡೆಮೆನ್ಷಿಯಾ ಮತ್ತು ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿರುವ ಅವರು ಸದ್ಯಕ್ಕೆ ಯಾರನ್ನೂ ಗುರುತು ಹಿಡಿಯುತ್ತಿಲ್ಲ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here