ವಾರ್ಷಿಕ ತರಬೇತಿ ಶಿಬಿರ

0
32

ತುಮಕೂರು:

                ಎನ್.ಸಿ.ಸಿ. ಬೆಂಗಳೂರು ಗ್ರೂಪ್ ‘ಎ’ ಸಂಯುಕ್ತಾಶ್ರಯದಲ್ಲಿ 3ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಬೆಂಗಳೂರು. ತುಮಕೂರಿನ ಎನ್.ಸಿ.ಸಿ. ಗ್ರೌಂಡ್ ನಲ್ಲಿ. ದಿನಾಂಕ 06-09-2018 ರಿಂದ 15-09-2018 ರವರೆಗೆ ನಡೆಯುತ್ತಿದ್ದು. ತುಮಕೂರು ನಗರದಲ್ಲಿ ಥಲ್ ಸೈನಿಕ್ ಲಾಂಚಿಂಗ್ ಕ್ಯಾಂಪ್ ಮತ್ತು ಸಂಯುಕ್ತ ವಾರ್ಷಿಕ ತರಬೇತಿ ಶಿಬಿರವನ್ನು ಕ್ಯಾಂಪ್ ಕಮಾಂಡೆಂಟ್ ಲೆಪ್ಟಿನೆಂಟ್ ಕರ್ನಲ್ ಜೆ.ಎನ್. ಕುಮಾರ್ ರವರು ಶಿಬಿರವನ್ನು ಉದ್ಘಾಟಿಸಿದರು.
                 ಶಿಬಿರದ ಮುಖ್ಯ ಉದ್ದೇಶವು ಥಲ್ ಸೈನಿಕ್ ಲಾಂಚಿಂಗ್ ಶಿಬಿರದ ಜೊತೆಯಲ್ಲಿ ಸಂಯುಕ್ತ ವಾರ್ಷಿಕ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕತೆ, ದೇಶಪ್ರೇಮ, ಸಮಯಪ್ರಜ್ಞೆ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿ, ಸಾಹಸ ಪ್ರವೃತ್ತಿಯಂತಹ ನಾಯಕತ್ವದ ಗುಣಗಳೊಂದಿಗೆ ದೇಶದ ಉತ್ತಮ ನಾಗರೀಕರನ್ನಾಗಿಸುವುದು, ಎನ್.ಸಿ.ಸಿ. ಶಿಬಿರದ ಉದ್ದೇಶವಾಗಿದೆ ಎಂದು ತಿಳಿಸಿದರಲ್ಲದೆ ಎನ್.ಸಿ.ಸಿ. ವಿಷಯಗಳಾದ ಡ್ರಿಲ್, ಮ್ಯಾಪ್ ರೀಡಿಂಗ್, ಬಂದೂಕು ಬಳಕೆ (ರೈಫಲ್ ಶೂಟಿಂಗ್), ಫೈರ್ ಪೈಟಿಂಗ್, ಟ್ರಾಫಿಕ್ ಸಿಗ್ನಲ್ ತರಬೇತಿ, ಮೊದಲಾದ ವಿಷಯಗಳೊಂದಿಗೆ ವ್ಯಕ್ತಿತ್ವ ವಿಕಸನದ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಳ್ಳಲಾಗಿದೆ.
                     ಈ ಹತ್ತು ದಿನಗಳ ಶಿಬಿರದಲ್ಲಿ ಬೆಂಗಳೂರು ಜಿಲ್ಲೆಯ, ರಾಮನಗರ ಜಿಲ್ಲೆಯ, ತುಮಕೂರು ಜಿಲ್ಲೆಯ ಹಾಗೂ ಮಂಗಳೂರು ಜಿಲ್ಲೆಯ ಸುಮಾರು 314 ವಿದ್ಯಾರ್ಥಿಗಳು ಭಾಗವಹಿಸಿದ್ದು ಇವರುಗಳಿಗೆ ಎನ್.ಸಿ.ಸಿ. ಅಧಿಕಾರಿಗಳು ಮತ್ತು ಮಿಲಿಟರಿ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಆಡಳಿತ ವರ್ಗದವರು ಈ ಶಿಬಿರದ ಆಯೋಜನೆಗ ಸತತ ಪರಿಶ್ರಮ ಪಟ್ಟಿದ್ದಾರೆ ಎಂದು ತಿಳಿಸಿದರು.
                   ಸ್ವಚ್ಛಭಾರತ ಅಭಿಯಾನದ ಅಂಗವಾಗಿ ತುಮೂರು ನಗರದಲ್ಲಿ ಸ್ವಚ್ಛತೆ ಮತ್ತು ಮಗಳನ್ನು ಉಳಿಸಿ ಮತ್ತು ಮಗಳನ್ನು ಬೆಳಸಿ ಎಂಬ ಜಾಗೃತಿ ಕಾರ್ಯಕ್ರಮ ಆಯೋಜಿಸಿಲಾಗಿದೆ.
                  ಶಿಬಿರದಲ್ಲಿ ವಿಶೇಷವಾಗಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಹೊಸ ಅನುಭವ, ಉನ್ನತ ವ್ಯಾಸಾಂಗದಲ್ಲಿ ಮೀಸಲಾತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಅನೇಕ ಸೌಲಭ್ಯಗಳನ್ನು ಎನ್.ಸಿ.ಸಿ. ಕೆಡೆಟ್ ಗಳು ಪಡೆಯುತ್ತಾರೆ ಅದರಲ್ಲೂ ಮೆಡಿಕಲ್ ವiತ್ತು ಇಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಸಿಗುತ್ತದೆ ಎಂದು ಡೆಪ್ಯೂಟಿ ಕಮಾಂಡೆಂಟ್ ಲೆಪ್ಟಿನೆಂಟ್ ಕರ್ನಲ್ ಗೌರವ ಬಾಜಪೈರವರು ತಿಳಿಸಿದರು. ಕ್ಯಾಂಪ್ ಅಡ್ಜೂಟೆಂಟ್ ಮೇಜರ್ ಮಲ್ಲಿಕಾರ್ಜುನ ಚೆನ್ಮಲ್ ರವರು ಎನ್.ಸಿ.ಸಿ. ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎನ್.ಸಿ.ಸಿ. ಕೆಡೆಟ್‍ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here